ಉದಯವಾಹಿನಿ ಮಾಲೂರು: ಕಸಬಾ ವಲಯದ ಯಶವಂತಪುರ ಕಾರ್ಯಕ್ಷೇತ್ರದ ಶುಭೋದಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದ ಜೊತೆಗೆ 24ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
   ತಾಲೂಕು ಯೋಜನಾಧಿಕಾರಿಗಳಾದ ಸತೀಶ್ ರವರು ಮಾತನಾಡಿ ಯೋಜನೆಯ ಕಾರ್ಯಕ್ರಮಗಳನ್ನು ಕುರಿತು ಹಾಗೂ ಜ್ಞಾನವಿಕಾಸ ಕಾರ್ಯಕ್ರಮದ ಪ್ರಾರಂಭ ಮಾಡಿದ ಬಗ್ಗೆ ಅಲ್ಲಿ ಆಯೋಜನೆ ಮಾಡುವಂತಹ ಕಾರ್ಯಕ್ರಮಗಳ ಬಗ್ಗೆ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯ  ವಿಸ್ತಾರವಾಗಿ ತಿಳಿಸಿದರು. ಮಹಿಳೆಯರಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಡುವಲ್ಲಿ ಯೋಜನೆಯಲ್ಲಿ ಉತ್ತಮವಾಗಿದ ಕಾರ್ಯಕ್ರಮವಾಗಿದೆ ಜ್ಞಾನವಿಕಾಸ ಯೂಟ್ಯೂಬ್ ನಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ತಿಳಿಸಿದರು.
     ಕೇಂದ್ರದ ಬಗ್ಗೆ  ಮಹಿಳೆಯರನ್ನು ಕುರಿತು ಶಿಕ್ಷಕಿ ನಾಗರತ್ನ ರವರು ಮಾಹಿತಿಯನ್ನು ನೀಡಿದರು. ಮಹಿಳೆ ಸ್ವಾವಲಂಬಿಯಾಗಿ ಬದುಕಲು ಹಾಗೂ ತನ್ನಲ್ಲಿರುವ ಕೌಶಲ್ಯಗಳ ಹೆಚ್ಚಿಸಿಕೊಳ್ಳುವಲ್ಲಿ ಇಂತಹ ಕಾರ್ಯಕ್ರಮಗಳು ಬೇಕು. ಇವು ಮಹಿಳೆಯರನ್ನ ಸಬಲೀಕರಣವನ್ನಾಗಿ ಮಾಡುತ್ತದೆ ಎಂದು ತಿಳಿಸಿದರು. ಜೊತೆಗೆ ಕಾರ್ಯಕ್ರಮಕ್ಕೆ ಶುಭ ಹಾರೈಕೆಯನ್ನು ತಿಳಿಸಿದರು. ಮುಖ್ಯವಾಗಿ ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಯೋಧರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

     ಈ ಕಾರ್ಯಕ್ರಮದಲ್ಲಿ ಸೈನಿಕರಾದ ಮುರುಗೇಶ್ ರವರು ಮಾತಾಡಿ ಇಂದು ಕಾರ್ಗಿಲ್ ದಿನಾಚರಣೆ ಇದ್ದು ಮಕ್ಕಳಲ್ಲಿ ದೇಶಭಕ್ತಿಯನ್ನು ಹುಟ್ಟಿಸುವಂತೆ ದೇಶ ಸೇವೆಯನ್ನು ಮಾಡಲು ಪ್ರೇರೇಪಿಸುವಂತೆ ಪೋಷಕರಿಗೆ ತಿಳಿಸಿದರು. ಚಿಕ್ಕಂದಿನಲ್ಲಿಯೇ ದೇಶಾಭಿಮಾನ ಬೆಳೆಸಬೇಕು. ನಮ್ಮ ವೀರ ಯೋಧರ ಧೈರ್ಯ, ಸಾಹಸಗಳ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಮಾಲೂರು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಸತೀಶ್,  ಅಧ್ಯಕ್ಷರಾದ ಪದ್ಮ, ಶಿಕ್ಷಕರಾದ ನಾಗರತ್ನ, ಸೈನಿಕರಾದ ಮುರುಗೇಶ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಉಷಾರಾಣಿ, ಸೇವಾ ಪ್ರತಿನಿಧಿಯಾದ ಸವಿತಾ ಹಾಗೂ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!