ಉದಯವಾಹಿನಿ, ನ್ಯಾಚುರಲ್ ಆಗಿ ಇರುವಂತಹವು ಹೆಚ್ಚು ಆರೋಗ್ಯ ಸುಧಾರಣೆಯ ಪೋಶಕಾಂಶಗಳನ್ನು ಹೊಂದಿರುತ್ತವೆ. ಆದರೆ ಜನರು ಇವುಗಳನ್ನು ಬಿಟ್ಟು ಕುರುಕಲು ತಿಂಡಿ, ಬಾಟಲಿಗಳನ್ನು ಬರುವ ಪಾನೀಯಗಳನ್ನು ಕುಡಿಯುತ್ತಾರೆ. ಇವು ಆಗಿನ ಸಮಯಕ್ಕೆ ಮಾತ್ರ ಆಹ್ಲಾದಕವಾಗಿ ಕಂಡರೂ ದೀರ್ಘಕಾಲದಲ್ಲಿ ಆರೋಗ್ಯಕ್ಕೆ ತುಂಬಾ ಅಪಾಯಕಾರಿಗಳು ಆಗಿವೆ. ಸದ್ಯ ಎಳನೀರು ಅಥವಾ ತೆಂಗಿನಕಾಯಿ ನೀರಿನ ಮಹತ್ವದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಪ್ರತಿದಿನ ಎಳನೀರು ಕುಡಿಯುವುದರಿಂದ ಅದರಲ್ಲಿರುವ ಅಧಿಕ ಎಲೆಕ್ಟ್ರೋಲೈಟ್ ಅಂಶ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಇದರಲ್ಲಿ ಪೊಟ್ಯಾಷಿಯಂ, ಸೋಡಿಯಂ ಹಾಗೂ ಮೆಗ್ನಿಷಿಯಂ ಅನ್ನು ಹೊಂದಿದೆ. ಇವುಗಳು ದೇಹದಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತವೆ. ಪೊಟ್ಯಾಷಿಯಂ ಸೋಡಿಯಂ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತವೆ. ನಿಯಮಿತವಾಗಿ ತೆಂಗಿನ ನೀರನ್ನು ಕುಡಿಯುವುದರಿಂದ ಹೃದಯ ಅಪಾಯ ಇರುವುದೇ ಇಲ್ಲ.
ಕೇವಲ ಹೃದಯಕ್ಕೆ ಮಾತ್ರವಲ್ಲ, ತೂಕ ಇಳಿಸಿಕೊಳ್ಳುವಲ್ಲಿಯೂ ಎಳನೀರು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ಖನಿಜಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಳನೀರಿನಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಪ್ರಬಲವಾಗುತ್ತ ಹೋಗುತ್ತದೆ.
ಸೋಂಕುಗಳು ಮತ್ತು ರೋಗಗಳು ತಗುಲದಂತೆ ರಕ್ಷಣೆ ಒದಗಿಸುತ್ತದೆ. ಇದು ದೇಹದ ಸಾಮರ್ಥ್ಯವನ್ನು ಹೆಚಿಸುತ್ತದೆ. ದೇಹದಲ್ಲಿನ ಉರಿಯೂತ ನಿವಾರಣೆ ಮಾಡುವ ಗುಣಗಳನ್ನು ತೆಂಗಿನನೀರು ಹೊಂದಿದೆ. ಚರ್ಮ ಹಾಗೂ ಕೂದಲಿನ ಪೋಷಣೆಗೂ ಎಳನೀರು ಅತ್ಯಂತ ಮುಖ್ಯವಾಗಿದೆ. ಸದ್ಯ ಬೇಸಿಗೆ ಬರುತ್ತಿದ್ದರಿಂದ ಎಳನೀರು ದರ ದುಬಾರಿಯಾದರೂ ಆಗಾಗ ಕುಡಿಯುವುದು ಮರೆಯಬೇಡಿ.
