ಉದಯವಾಹಿನಿ, ಸಿಡ್ನಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆ ಕಳೆದ ಪ್ರತಿ ನಿಮಿಷದ ಬಗ್ಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. 9 ನ್ಯೂಸ್ ಆಸ್ಟ್ರೇಲಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆ ಇಮೇಲ್ ಅನ್ನು ಎಂದಿಗೂ ಕಳುಹಿಸಿಲ್ಲ. ಆತನ ಆಲೋಚನೆ ಏನು ಎನ್ನುವುದು ನನಗೆ ತಿಳಿದಿಲ್ಲ ಎಂದು ಹೇಳಿದರು.
2011ರಲ್ಲಿ ಎಪ್‌ಸ್ಟೀನ್ ನಾನು ಭೇಟಿಯಾಗಿದ್ದೆ.
ಮೂರು ವರ್ಷಗಳಲ್ಲಿ ನಾವು ಹಲವಾರು ಬಾರಿ ಆತನ ಜೊತೆ ಭೋಜನ ಮಾಡಿದ್ದೇನೆ. ಆದರೆ ಆತನ ಕುಖ್ಯಾತ ದ್ವೀಪಕ್ಕೆ ಎಂದಿಗೂ ಭೇಟಿ ನೀಡಿಲ್ಲ ಮತ್ತು ಮಹಿಳೆಯರೊಂದಿಗೆ ನಾನು ಸಂಬಂಧ ಹೊಂದಿಲ್ಲ ಎಂದು ತಿಳಿಸಿದರು. ವಿಶ್ವದ ಶ್ರೀಮಂತ ವ್ಯಕ್ತಿಗಳ ಜೊತೆ ಆತನಿಗೆ ಪರಿಚಯವಿತ್ತು. ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಹಣವನ್ನು ನೀಡಬೇಕು ಎಂದು ಆತ ಹೇಳಿದ್ದ ಎಂದು ಹೇಳಿದರು.ಅಮೆರಿಕದ ನ್ಯಾಯಾಂಗ ಇಲಾಖೆ ಕಳೆದ ವಾರ ಎಪ್‌ಸ್ಟೀನ್‌ಗೆ ಸಂಬಂಧಿಸಿದ 30 ಲಕ್ಷಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈ ದಾಖಲೆಯಲ್ಲಿ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ ನಂತರ ಲೈಂಗಿಕವಾಗಿ ಹರಡುವ ರೋಗಗೆ ತುತ್ತಾಗಿದ್ದರು. ಇದಕ್ಕೆ ಹೆದರಿ, ಗೇಟ್ಸ್ ಎಪ್ಸ್ಟೀನ್ ಅವರನ್ನು ಮೆಲಿಂಡಾಗೆ ರಹಸ್ಯವಾಗಿ ನೀಡಬಹುದಾದ ಆ್ಯಂಟಿಬಯೋಟಿಕ್ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಜೆಫ್ರಿ ಎಪ್‌ಸ್ಟೀನ್ 2019ರಲ್ಲಿ 30 ದಿನಗಳ ಸೆರೆವಾಸ ಅನುಭವಿಸಿದ್ದಾಗಲೇ ಸಾವನ್ನಪ್ಪಿದ್ದ. ತನಿಖೆ ನಡೆಸಿರುವ ಎಫ್‌ಐಬಿ ಎಪ್‌ಸ್ಟೀನ್ ಎಸ್ಟೇಟ್‌ನಿಂದ 20 ಸಾವಿರ ಪುಟಗಳ ದಾಖಲೆಯನ್ನು ವಶಕ್ಕೆ ಪಡೆದಿತ್ತು. ಈ ದಾಖಲೆಯಲ್ಲಿ ಟ್ರಂಪ್‌ಗೆ ಸಂಬಂಧಿಸಿದ 2018 ಮೆಸೇಜ್‌ಗಳು ಇವೆ.
