ಉದಯವಾಹಿನಿ ಪೀಣ್ಯ ದಾಸರಹಳ್ಳಿ :  ಅಂತ ರಾಷ್ಟ್ರೀಯ ಹಿಂದೂ ಪರಿಷದ್ ರಾಷ್ಟ್ರೀಯ ಬಜರಂಗದಳದ ಹಾಗೂ ಹಿಂದುಸ್ತಾನ್ ಹೆಲ್ಪ್ ಲೈನ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಬಾಯ್ ತೊಗಾಡಿಯಾ  ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ವಿ.ಆನಂದ್ ಅವರ ನೇತೃತ್ವದಲ್ಲಿ ಸಾಯಿ  ಆಸ್ಪತ್ರೆ, ನಾಡ ವರ್ಡ್ ವೆಲ್ಫೇರ್ ಟ್ರಸ್ಟ್ ಹಾಗೂ ದಿವ್ಯದೃಷ್ಟಿ ಐ ಆಸ್ಪತ್ರೆ ಸಹಯೋಗದೊಂದಿಗೆ ಬಿಪಿ, ಶುಗರ್, ಕಣ್ಣಿನ ಪರೀಕ್ಷೆ, ಮಧುಮೇಹ ಪರೀಕ್ಷೆ, ಬೃಹತ್ ರಕ್ತದಾನ ಶಿಬಿರ ಮತ್ತು ವಿವಿಧ ರೋಗಗಳ ಪರೀಕ್ಷೆ ಮಾಡಿ ಸ್ಥಳದಲ್ಲೇ ಔಷಧಿ ಮತ್ತು ಕನ್ನಡಕ ವಿತರಿಸಲಾಯಿತು ಅಂತರಾಷ್ಟ್ರೀಯ ಹಿಂದೂ ಪರಿಷದ ಪ್ರದೀಪ್ ಗೌರವ್ ಶ್ರೀ ರಾಮ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿ ಮಾತನಾಡಿದರು.ರಾಜ್ಯಾಧ್ಯಕ್ಷ ವಿ ಆನಂದ್ ಮಾತನಾಡಿ ಇಡಿ
ರಾಷ್ಟ್ರಾದ್ಯಂತ ಒಂದು ಲಕ್ಷ ಆರೋಗ್ಯ ತಪಾಸಣೆ ಶಿಬಿರಗಳು ಪಚಲಿತದಲ್ಲಿದ್ದು ರಾಜ್ಯದಲ್ಲಿ ಹುಬ್ಬಳ್ಳಿ, ಧಾರವಾಡ,ಬಿದರ್, ಕಲಬುರ್ಗಿ,ಗದಗ, ವಿಜಾಪುರ  ‌ಸೇರಿದಂತೆ ಇಂದು ಬೆಂಗಳೂರು ಉತ್ತರ ಜಿಲ್ಲಾ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಫ್ರೆಂಡ್ಸ್ ಕಾಲೊನಿ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದು ಸಾರ್ವಜನಿಕರು ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿ.ಆನಂದ್ ಸಾರ್ವಜನಿಕರಲ್ಲಿ ಮನವಿ ಮಾಡಿ ಮಾತಾಡಿದರು. ಈ ಸಂದರ್ಭದಲ್ಲಿ  ರಮೇಶ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಬುನಾಥ್, ಬೆಂಗಳೂರು ಜಿಲ್ಲಾಧ್ಯಕ್ಷ ಸೌಂದರ್ಯರಾಜು, ದಾಸರಹಳ್ಳಿ ಕ್ಷೇತ್ರದ ಅಧ್ಯಕ್ಷ ಶಂಕರ್, ರಾಷ್ಟ್ರೀಯ ಮಹಿಳಾ ಪರಿಷತ್ ದಾಸರಹಳ್ಳಿ ಅಧ್ಯಕ್ಷೆ ಲತಾ ಕೆ.ಎಸ್, ಪ್ರಸನ್ ಕುಮಾರ್, ಪಿ. ಮಧು, ಬಸಂತ್ ಕುಮಾರ್, ಅರುಣ್ ಕುಮಾರ್, ಶಿವರಾಂ, ಪೀಣ್ಯ ಕಾಂತರಾಜು, ಹನುಮಂತ್ರಾಜು ಜಗ, ಸತೀಶ್, ತಾರಕೇಶ್, ವಿನೋದ್, ಅರುಣ, ಅಸೇನ್ ಶ್ರೀಕಾಂತ್, ದಾಸರಹಳ್ಳಿ ಕ್ಷೇತ್ರದ ರಾಷ್ಟ್ರೀಯ ಬಜರಂಗದಳದ ಅಧ್ಯಕ್ಷ ಗೋವಿಂದರಾಜು, ರವಿಕುಮಾರ್ , ವೆಂಕಟೇಶ್, ರಾಜು, ಶ್ರೀಕಾಂತ್  ಸೇರಿದಂತೆ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪದಾಧಿಕಾರಿಗಳು ಕಾರ್ಯಕರ್ತರು ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!