ಉದಯವಾಹಿನಿ ತಾಳಿಕೋಟಿ: ೨೦೦೯ ರ ನಂತರ ಸಂಗೀತ ಶಿಕ್ಷಕರ ನೇಮಕಾತಿ ಇಲ್ಲಿಯವರೆಗೂ ನಡೆದಿಲ್ಲ. ಸಮಾಜಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಸುಮಾರು ೨೪೬ ಕ್ಕೂ ಹೆಚ್ಚು ಹುದ್ದೇಗಳು ಖಾಲಿ ಇವೆ. ಅವುಗಳನ್ನು ಆದಷ್ಟು ಬೇಗ ಭರ್ತಿಮಾಡಿಕೊಳ್ಳಬೇಕೆಂದು ಒತ್ತಾಯಿಸಿ ನವ ಕರ್ನಾಟಕ ಸಂಗೀತ ಪದವಿಧರರ ಸಂಘ (ರಿ) ಕಲಬುರಗಿ ಇದರ ತಾಳಿಕೋಟಿ ಘಟಕದ ಪದಾಧಿಕಾರಿಗಳು ತಾಲೂಕಾ ಆಡಳಿತಕ್ಕೆ ಮನವಿ ಸಲ್ಲಿಸಿದರು.
ಶಿದಸ್ತೇದಾರ ಜೆ. ಆರ್. ಜ್ಯೆನಾಪೂರ ಮೂಲಕ ತಹಶೀಲ್ದಾರಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಸದಸ್ಯ ಕಾಶೀನಾಥ ಕಾರಗನೂರ ಅವರು ಸುಮಾರು ೧೪ ವರ್ಷಗಳಿಂದ ಸರಕಾರ ಖಾಲಿ ಇರುವ ಸಂಗಿತ ಶಿಕ್ಷಕರ ಹುದ್ದೇಗಳನ್ನು ಭರ್ತಿ ಮಾಡದೇ ಇರುವುದರಿಂದ ನಾವು ತೀವ್ರ ಸಂಕಷ್ಟದಲ್ಲಿದ್ದೇವೆ , ಕಳೆದ ೧೦ ವರ್ಷಗಳಿಂದ ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ ಇಲ್ಲಿಯವರೆಗೆ ನಮಗೆ ನ್ಯಾಯಸಿಕ್ಕಿಲ್ಲ.ಈಗಲಾದರು ಘನ ಸರಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ ಆದಷ್ಟು ಬೇಗ ಖಾಲಿ ಹುದ್ದೇಭರ್ತಿ ಮಾಡಿಕೊಳ್ಳಬೇಕು.
ನಮ್ಮ ಕೆಲವು ಪ್ರಮುಖ ಬೇಡಿಕೆಗಳಿವೆ, ನೇಮಕಾತಿ ಸಂದರ್ಭದಲ್ಲಿ ವಯೋಮಿತಿ ಮೀರುತ್ತಿರುವವರಿಗೆ ಆದ್ಯತೆ ಕೊಡಬೇಕು. ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲೂ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಏಕಲವ್ಯ, ಕಿತ್ತೂರು, ಚನ್ನಮ್ಮ, ಅಟಲ್‌ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿಯೂ ನೇಮಕವಾಗಬೇಕು ಎಂದು ಹೇಳಿದರು.
ಈ ವೇಳೆ ತಾಲೂಕ ಕಾರ್ಯದರ್ಶಿ ಮಹೇಶ ಭಂಟನೂರ, ಸದಸ್ಯರಾದ ದೀಪಕಸಿಂಗ್ ಹಜೇರಿ, ಸುರೇಶ ಹೂಗಾರ, ರಿಯಾಜ್ ಮುಲ್ಲಾ, ಹಣಮಂತ ಬಳಗಾನೂರ, ಬಸನಗೌಡ ಬಿರಾದಾರ, ರಾಜು ಗುಬ್ಬೇವಾಡ, ಬಡಿಗೇರ, ವಿನೋದಕುಮಾರ ಚಿಕ್‌ಮಠ, ಅರುಣ್ ಬಡಿಗೇರ, ಕುಮಾರ ಕುದರಿಗುಂಡ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!