
ಉದಯವಾಹಿನಿ ದೇವರಹಿಪ್ಪರಗಿ: ಯುವಕರೆಲ್ಲ ದುಶ್ಚಟಗಳ ದಾಸರಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಸಮಾಜೋಪಯೋಗಿಯಾದ ಮದ್ಯವರ್ಜನ ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ,ಯುವಜನತೆ ಈ ಶಿಬಿರದ ಪ್ರಯೋಜನ ಪಡೆದು ದುಶ್ಚಟಗಳಿಂದ ದೂರವಾದಾಗ ಸಮಾಜದಲ್ಲಿ ನೆಮ್ಮದಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ)ಅವರು ಹೇಳಿದರು.ಪಟ್ಟಣದ 1008 ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸಿಂದಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ದೇವರಹಿಪ್ಪರಗಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ 8ದಿನಗಳ ಕಾಲ ಆಯೋಜಿಸಲಾಗಿರುವ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಟ್ಟುಹಾಕಿ ಇಂತಹ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಎಲ್ಲರನ್ನು ಸದೃಢ ರನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.ಇದೇ ಸಂದರ್ಭದಲ್ಲಿ ಇನ್ನೋರ್ವ ಮುಖ್ಯಅತಿಥಿ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ಮಾತನಾಡಿ ನೂರಾರು ಆಡಂಬರದ ಕಾರ್ಯಕ್ರಮಗಳನ್ನು ಆಯೋಜಿಸುವದಕ್ಕಿಂತಲೂ ಇಂತಹ ಜನಸ್ನೇಹಿ ಹಾಗೂ ಪುಣ್ಯದ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನ ಮುಕ್ತ ಸಮಾಜ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು. ಸಭೆಯಲ್ಲಿ ಭಾಗವಹಿಸಿದ್ದ ದೇವರಹಿಪ್ಪರಗಿ ಪಿ ಎಸ್ ಐ ಆರ್ ವಾಯ್ ಬೀಳಗಿ ಅವರು ಮಾತನಾಡುತ್ತಾ ಮದ್ಯವ್ಯಸನಿಗಳಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬರುತ್ತಿದ್ದು ಇಂತಹ ಕಾರ್ಯಕ್ರಮಗಳಿಂದಾಗಿ ಎಷ್ಟೋ ಕುಟುಂಬಗಳಿಗೆ ಒಳ್ಳೆಯದಾಗುತ್ತದೆ ಎಂದರು.ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಹಾಗೂ ರಾಜೇಶ್ ಅವರುಗಳು ಶಿಬಿರದ ಕುರಿತು ಸಂಪೂರ್ಣವಾದ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಾಕ್ಷರಿ ಮಿಂಚನಾಳ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಸ್ಥಳೀಯ ಗದ್ದುಗೆ ಮಠದ ಮಡಿವಾಳೇಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಶಿಬಿರದ ಗೌರವಾಧ್ಯಕ್ಷರಾದ ಡಾ ಆರ್ ಆರ್ ನಾಯಕ , ಹೆಸ್ಕಾಂ ಎ ಇ ಇ ವಿಜಯಕುಮಾರ ಹವಾಲ್ದಾರ್, ಬಸಯ್ಯ ಮಲ್ಲಿಕಾರ್ಜುನಮಠ,ಗಿರೀಶಕುಮಾರ,ಬಾಬು ರಾವ್ ಗೋಣಿ,ವಿಶ್ವನಾಥ ಸದಲಗೆ,ವೀರೇಶ ಕುದುರಿ, ರಮೇಶ ಮಸಬಿನಾಳ, ಸೋಮು ದೇವೂರ, ಶಂಕರಗೌಡ ಪಾಟೀಲ, ವಿನೋದಗೌಡ ಪಾಟೀಲ, ಎ ಎಚ್ ವಾಲೀಕಾರ, ಎಮ್ ಜಿ ಯಂಕಂಚಿ, ಪ ಪಂ ಸದಸ್ಯರು, ಪಟ್ಟಣದ ಪ್ರಮುಖರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಈ ಶಿಬಿರವು ಆಗಸ್ಟ್ -2ರವರೆಗೆ ನಿರಂತರವಾಗಿ ನಡೆಯಲಿದೆ.
