ಉದಯವಾಹಿನಿ, ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಭೇಟಿ ನೀಡಿದ್ದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಕಾಶ್ಮೀರ ಶೀಘ್ರದಲ್ಲೇ ವಿಮೋಚನೆಗೊಳ್ಳಲಿದೆ. ಕಾಶ್ಮೀರಿ ಜನರ ಸ್ವ-ನಿರ್ಣಯದ ಹಕ್ಕಿಗೆ ಪಾಕಿಸ್ತಾನ ಅಚಲ ರಾಜಕೀಯ, ನೈತಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡಲಿದೆ. ಇಲ್ಲಿ ನಿಯೋಜಿಸಲಾಗಿರುವ ಅಧಿಕಾರಿಗಳು, ಸೈನಿಕರು ಸದಾ ಯುದ್ಧಕ್ಕೆ ಸನ್ನದ್ದರಾಗಿರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಶೆಹಬಾಜ್‌ ಷರೀಫ್ ಕೂಡ, ಕಾಶ್ಮೀರದ ಸ್ವಾತಂತ್ರ್ಯಹೋರಾಟಕ್ಕೆ ಪಾಕಿಸ್ತಾನದ ಬೆಂಬಲ ಇರಲಿದೆ. ಇಡೀ ಕಾಶ್ಮೀರ ಇಂದಲ್ಲ ನಾಳೆ ಪಾಕಿಸ್ತಾನದ ಭಾಗವಾಗಲಿದೆ ಎಂದು ಹೇಳಿದರು.
ಇತ್ತೀಚಿನ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಪಾಕಿಸ್ತಾನ ಪ್ರಧಾನಿ,ಈ ಸಂಘರ್ಷದ ಬಳಿಕ ಕಾಶ್ಮೀರ ಸಮಸ್ಯೆಯನ್ನು ಜಾಗತಿಕ ವೇದಿಕೆಗೆ ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜಗತ್ತು ಈಗ ದೀರ್ಘ ಕಾಲದ ಕಾಶ್ಮೀರ ಸಮಸ್ಯೆ ಬಗ್ಗೆ ಪಾಕಿಸ್ತಾನದ ವಾದವನ್ನು ಆಲಿಸುತ್ತಿದೆ ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *

error: Content is protected !!