ಉದಯವಾಹಿನಿ, ನವದೆಹಲಿ: ವ್ಯಾಪಾರ ಒಪ್ಪಂದದಿಂದ ಆಮದು ಮಾಡಿಕೊಂಡ ಅಮೆರಿಕದ ಹಾರ್ಲೆ- ಡೇವಿಡ್ಸನ್‌ ಬೈಕ್‌ಗಳ ಬೆಲೆ ಭಾರತದಲ್ಲಿ ಭಾರೀ ಇಳಿಕೆಯಾಗಲಿದೆ.
800 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಉನ್ನತ ಮಟ್ಟದ ಮೋಟಾರ್‌ಸೈಕಲ್‌ಗಳ ಮೇಲಿನ ಸುಂಕವನ್ನು ತೆಗೆದುಹಾಕಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಿನಿಂದಲೂ ಬೇಡಿಕೆ ಇಟ್ಟಿದ್ದರು. ವ್ಯಾಪಾರ ಒಪ್ಪಂದದಿಂದ ಸಂಪೂರ್ಣವಾಗಿ ನಿರ್ಮಿಸಿ ಆಮದು ಮಾಡಿಕೊಂಡ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳು ಬೆಲೆ ಬಹಳ ಕಡಿಮೆಯಾಗಲಿದೆ. ಈ ಮೋಟಾರ್‌ಸೈಕಲ್‌ಗಳಿಗೆ ಪ್ರಸ್ತುತ 0% ಮೂಲ ಕಸ್ಟಮ್ಸ್ ಸುಂಕ ಮತ್ತು 4% ಸಾಮಾಜಿಕ ಕಲ್ಯಾಣ ಸರ್‌ಚಾರ್ಜ್ ಸೇರಿದಂತೆ 44% ಆಮದು ಸುಂಕವನ್ನು ಹಾಕಲಾಗುತ್ತಿತ್ತು. ಪರಿಣಾಮ 14 ಲಕ್ಷದ ಬೈಕಿಗೆ ಸುಮಾರು 6 ಲಕ್ಷ ರೂ.ವನ್ನು ಸುಂಕ ಬೀಳುತ್ತಿತ್ತು.
ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಭಾರತದಲ್ಲಿ 14.54 ಲಕ್ಷ ರೂ.ನಿಂದ 45.75 ಲಕ್ಷ ರೂ.ವರೆಗಿನ 800-1600 ಸಿಸಿ ಎಂಜಿನ್‌ಗಳನ್ನು ಹೊಂದಿರುವ ಸಂಪೂರ್ಣ ಆಮದು ಮಾಡಿಕೊಂಡ 187 ಹಾರ್ಲೆ-ಡೇವಿಡ್ಸನ್ ಬೈಕ್‌ಗಳು ಮಾರಾಟವಾಗಿದೆ.

 

Leave a Reply

Your email address will not be published. Required fields are marked *

error: Content is protected !!