ಉದಯವಾಹಿನಿ, ಚಂಡೀಗಢ: 500 ಕೋಟಿ ರೂ. ವಂಚನೆ ಪ್ರಕರಣದಲ್ಲಿ 32ನೇ ಅವೆನ್ಯೂ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಯ ಸ್ಥಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಧ್ರುವ್ ದತ್ ಶರ್ಮಾನನ್ನು ಬಂಧಿಸಲಾಗಿದೆ.
ಈತ ಒಂದು ಫ್ಲೋರ್ ಅನ್ನು 25 ಕ್ಕೂ ಹೆಚ್ಚು ಜನರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಈತ ಸುಮಾರು 500 ಕೋಟಿ ರೂ. ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಲಾಗಿತ್ತು. ನಂತರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಶರ್ಮಾ ವಿವಿಧ ಜನರಿಗೆ ಸುಮಾರು 500 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. 2021 ರಲ್ಲಿ, ಸಂಸ್ಥೆಯ ನಿರ್ದೇಶಕರು ಮತ್ತು ಷೇರುದಾರರು ಟ್ರಾಮ್ ವೆಂಚರ್ಸ್ ಅನ್ನು ಸಂಪರ್ಕಿಸಿ ಅವರ 32ನೇ ಅವೆನ್ಯೂ ಸಂಕೀರ್ಣದ ಮೊದಲ ಮಹಡಿಯಲ್ಲಿ 3000 ಚದರ ಅಡಿ ವಿಸ್ತೀರ್ಣದ (ಸಂಖ್ಯೆ 24) ಯೂನಿಟ್ ಅನ್ನು ಮಾರಾಟಕ್ಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಒಪ್ಪಂದವನ್ನು 2.5 ಕೋಟಿ ರೂ.ಗಳಿಗೆ ಮಾಡಲಾಗಿತ್ತು. ಆ ವರ್ಷ ಸೆಪ್ಟೆಂಬರ್ 21 ರಂದು ಮೊತ್ತವನ್ನು ಪಾವತಿಸಲಾಗಿತ್ತು. ಆದರೆ ಅವರಿಗೆ ಅಗತ್ಯ ದಾಖಲೆಗಳು ಸಿಗಲಿಲ್ಲ.
