ಉದಯವಾಹಿನಿ, ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್ ನಾಪತ್ತೆ ಆರೋಪ ಪ್ರಕರಣದ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ರು. ಬೆಂಗಳೂರಿನಲ್ಲಿ ಮಾತಾಡಿದ ಅವರು, ಈ ಪ್ರಕರಣದಲ್ಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನಸೌಧದ ಗೇಟ್ ನಿಂದ ಆ ಬ್ಯಾಗ್ ಹೇಗೆ ಒಳಗೆ ಹೋಯ್ತು? ಯಾವ ಗೇಟ್ ನಿಂದ ಒಳಗೆ ಹೋಯ್ತು ಅನ್ನೋದು ಮುಖ್ಯ. ಒಬ್ಬ ಸಚಿವರ ಕೊಠಡಿವರೆಗೆ ಆ ಬ್ಯಾಗ್ ಹೋಗುತ್ತೆ ಅಂದ್ರೆ, ಅದೂ ಯಾರಿಗೂ ಗೊತ್ತಾಗದೇ ಬ್ಯಾಗ್ ತಗೊಂಡ್ ಹೋಗಿದ್ದಾರೆ. ಅದನ್ನೆಲ್ಲ ಪತ್ತೆ ಮಾಡಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಕಳವು ಆಗಿರೋದು 2ನೇ ವಿಚಾರ. ಆದ್ರೆ ಆ ಬ್ಯಾಗ್ ಹೇಗೆ ಒಳಗೆ ತಂದ್ರು ಅನ್ನೋದು ನೋಡಬೇಕು. ನವೀನ್ ಅನ್ನೋ ವ್ಯಕ್ತಿ ವಿಧಾನಸೌಧದ ಒಳಗೆ ಬ್ಯಾಗ್ ತಗೊಂಡ್ ಹೋಗಿರೋದು. ಇದರ ತನಿಖೆ ಮಾಡ್ತೇವೆ ಅಂದರು.
