ಉದಯವಾಹಿನಿ, ಬಳ್ಳಾರಿ: ಸಿಎಂ ಪರವಾಗಿ ಯತೀಂದ್ರ ಬ್ಯಾಟಿಂಗ್‌ ಮಾಡಿದ್ದರು. ಈಗ ಆಪ್ತ ಸಚಿವ ಜಮೀರ್‌ ಅಹ್ಮದ್‌ ಸಿದ್ದರಾಮಯ್ಯ ಪರ‌ ಮತ್ತೆ ಮಾತನಾಡಿದ್ದಾರೆ. 2028ರವರೆಗೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಸಾರಥ್ಯದಲ್ಲಿ 2028ರ ಚುನಾವಣೆಗೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮದು ಹೈಕಮಾಂಡ್ ಪಕ್ಷ. ಮುಖ್ಯಮಂತ್ರಿ ಬದಲಾವಣೆ ಮಾಡುವುದು ನಮ್ಮ ಹಾಗೂ ನಾಗೇಂದ್ರ ಅವರ ಕೈಯಲ್ಲಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!