![]()
ಉದಯವಾಹಿನಿ, ಶಿಮ್ಲಾ: ಜಿಲ್ಲೆಯ ರಾಮಪುರ ಉಪವಿಭಾಗದಲ್ಲಿ ಮೇಘಸ್ಫೋಟದಿಂದ ಶಾಲೆ, ಐದು ಮನೆಗಳು ಮತ್ತು ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿವೆ. ಭೂಕುಸಿತದಿಂದ ಜಕ್ರಿ ಮತ್ತು ಜೋರಿ ಪ್ರದೇಶಗಳ ಬಳಿ ರಾಷ್ಟ್ರೀಯ ಹೆದ್ದಾರಿ 5 ಬಂದ್ ಆಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸರಪಾರಾ ಪಂಚಾಯಿತಿ ವ್ಯಾಪ್ತಿಯ ಕಂಧಾರ್
ಗ್ರಾಮದಲ್ಲಿ ಮಂಗಳವಾರ ಮೇಘಸ್ಫೋಟದಿಂದ ಸುಮಾರು 20 ಕುರಿಗಳು ಮತ್ತು ಜಾನುವಾರುಗಳು ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿವೆ. ಭೂಕುಸಿತದಿಂದ ಶಿಮ್ಲಾ- ಕಣ್ಣೂರ್ ರಸ್ತೆ ಬಂದ್ ಆಗಿದೆ ಎಂದು ರಾಮಪುರ ಉಪ ವಿಭಾಗದ ಮ್ಯಾಜಿಸ್ಟ್ರೇಟ್ ನಿಶಾಂತ್ ತೋಮರ್ ತಿಳಿಸಿದ್ದಾರೆ. ಐದು ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಸುಂದಾ ಗ್ರಾಮದ ಸಮೀಪ ಕಲ್ಲು ಉರುಳಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ವಾಹನಗಳ ಚಾಲಕರು ಮತ್ತು ಪ್ರಯಾಣಿಕರನ್ನು ಪಾರುಮಾಡಲಾಗಿದೆ.
