ಉದಯವಾಹಿನಿ, ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ಹತ್ಯೆ ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕ ನ್ಯಾಯಾಲಯದ ಮುಂದೆ ತಾನೇ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ.
54 ವರ್ಷದ ನಿಖಿಲ್ ಗುಪ್ತಾ, ಪನ್ನು ಹತ್ಯೆಗೆ ಸುಪಾರಿ ನೀಡಲು ಹಣ ವರ್ಗಾವಣೆ ಮಾಡಿದ್ದು ಹಾಗೂ ಸಂಪರ್ಕ ಸಾಧಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯವು ಮೇ 29ರಂದು ಶಿಕ್ಷೆ ಪ್ರಕಟಿಸುವುದಾಗಿ ತಿಳಿಸಿದ್ದು, ಅವರಿಗೆ ಗರಿಷ್ಠ 40 ವರ್ಷಗಳ ಜೈಲು ಶಿಕ್ಷೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಮೆರಿಕದ ಪ್ರಾಸಿಕ್ಯೂಟರ್‌ಗಳ ಪ್ರಕಾರ, ಈ ಸಂಚು 2023ರಲ್ಲಿ ರೂಪುಗೊಂಡಿದ್ದು, ವಿಕಾಸ್ ಯಾದವ್ ಎಂಬ ನಿವೃತ್ತ ಅಧಿಕಾರಿಯ ನಿರ್ದೇಶನದ ಮೇರೆಗೆ ನಡೆದಿತ್ತು ಎಂಬ ಆರೋಪವೂ ಹೊರಬಂದಿದೆ. ಹತ್ಯೆಗೆ ಸುಮಾರು ಒಂದು ಲಕ್ಷ ಡಾಲರ್ ಮಾತುಕತೆ ನಡೆದಿದ್ದು, ಅದರ ಒಂದು ಭಾಗ ಮುಂಗಡವಾಗಿ ನೀಡಲಾಗಿತ್ತು. ಬಳಿಕ ಪನ್ನು ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಶೂಟರ್‌ಗೆ ನೀಡಲಾಗಿತ್ತು. ಇನ್ನೇನು ಹತ್ಯೆ ಮಾಡಬೇಕು ಎನ್ನುವಾಗ ಎಫ್‌ಬಿಐ ಈ ಪ್ರಕರಣವನ್ನ ಭೇದಿಸಿತು.

Leave a Reply

Your email address will not be published. Required fields are marked *

error: Content is protected !!