ಉದಯವಾಹಿನಿ, ನಟಿ ಮೃಣಾಲ್ ಠಾಕೂರ್ ಹಾಗೂ ನಟ ಧನುಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಫೆಬ್ರವರಿ 14ರಂದು ಇವರ ವಿವಾಹ ನಡೆಯಲಿದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಈ ವಿಷಯವನ್ನು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ. ಒಟ್ಟಿಗೆ ಕಾಣಿಸಿಕೊಂಡ ಕೆಲವು ಸಂದರ್ಭಗಳು ಮತ್ತು ಫೋಟೋಗಳು ಈ ವದಂತಿಗೆ ಕಾರಣವಾಗಿದ್ದವು.
ಇದೀಗ ಒಂದು ಸಂದರ್ಶನದಲ್ಲಿ ಮಾತನಾಡಿದ ಮೃಣಾಲ್, ಈ ಸುದ್ದಿಗೆ ಹಾಸ್ಯಭರಿತವಾಗಿ ಉತ್ತರ ನೀಡಿದ್ದಾರೆ. “ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಕೂಡ ಅಲ್ಲ. ನನ್ನ ಮದುವೆ ಏಪ್ರಿಲ್ 1ರಂದು ನಡೆಯುತ್ತದೆ, ಏಕೆಂದರೆ ಅದು ಮೂರ್ಖರ ದಿನ” ಎಂದು ಅವರು ನಗುತ್ತಾ ಹೇಳಿದರು.

Leave a Reply

Your email address will not be published. Required fields are marked *

error: Content is protected !!