ಉದಯವಾಹಿನಿ, ಬೆಂಗಳೂರು: ಕಟ್ಟಾ ಕಾಂಗ್ರೆಸಿಗರು ಯಾರೂ ಬೀದಿ ನಾಯಿಗಳಲ್ಲ, ಯಾವತ್ತಿದ್ರೂ ನಿಯತ್ತಿನ ನಾಯಿಗಳು ಎಂದು ಹೇಳುವ ಮೂಲಕ ಮಾಜಿ ಸಂಸದ ಡಿಕೆ ಸುರೇಶ್ , ಸೈಲೆಂಟಾಗೆ ಸಚಿವ ಹೆಚ್.ಸಿ ಮಹದೇವಪ್ಪಗೆ ಟಾಂಗ್ ಕೊಟ್ಟರು. ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಯಕತ್ವ ಚರ್ಚೆಯನ್ನ ನಾಯಿಗೆ ಹೋಲಿಸಿದ ಹೆಚ್.ಸಿ ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಹದೇವಪ್ಪ ಅವರು ಯಾವುದೇ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ಕಟ್ಟಾ ಕಾಂಗ್ರೆಸಿಗರು ಯಾರು ಬೀದಿ ನಾಯಿಗಳಲ್ಲ. ಬೀದಿ ನಾಯಿಗೆ ಊಟ ಹಾಕೋದು ಯಾತಕ್ಕೆ? ಅವು ನಮ್ಮನ್ನ ಕಾಯುತ್ತವೆ ಅಂತಾ ತಾನೇ. ನಾಯಿಗಿರೋ ನಿಯತ್ತು ಮನುಷ್ಯರಿಗಿಲ್ಲ ಅಂತಾರೆ. ಹಲವಾರು ಸನ್ನಿವೇಶದಲ್ಲಿ ಆ ನಾಣ್ಣುಡಿ ಕೇಳಿದ್ದೇವೆ. ಕಟ್ಟಾ ಕಾಂಗ್ರೆಸಿಗರು ಯಾವತ್ತಿದ್ರೂ ನಿಯತ್ತಿನ ನಾಯಿಗಳು ಋಣ ತೀರಿಸೋ ವ್ಯಕ್ತಿತ್ವದ ನಾಯಿಗಳು, ಯಜಮಾನನ ಋಣ ತೀರಿಸೋ ನಾಯಿಗಳು ಎಂದು ಹೇಳಿದ್ರು.
