ಉದಯವಾಹಿನಿ, ಇಸ್ರೇಲ್ ಸೇನೆ ಲೆಬನಾನ್-ಸಿರಿಯಾ ಗಡಿ ಭಾಗದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಲೆಬನಾನ್ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಕದನ ವಿರಾಮ ಜಾರಿಯಾದ ನಂತರ ನಡೆದ ಈ ದಾಳಿ ಪ್ರದೇಶದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಜ್ಜಲ್ ಅಂಜರ್ ಪ್ರದೇಶದಲ್ಲಿ ಡೋನ್ ದಾಳಿ ನಡೆಸಿ ಕಾರೊಂದನ್ನು ಗುರಿಯಾಗಿಸಿಕೊಂಡಿದ್ದಾಗಿ ವರದಿಯಾಗಿದೆ.
ಮೃತಪಟ್ಟವರಲ್ಲಿ ಸಿರಿಯಾ ಮೂಲದ ಒಬ್ಬ ವ್ಯಕ್ತಿ ಸೇರಿರುವುದು ದೃಢಪಟ್ಟಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಈ ದಾಳಿ ಕುರಿತು ಇಸ್ರೇಲ್ ಸೇನೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿ, ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್‌ ಸಂಘಟನೆಯ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ನವೆಂಬರ್ 2024ರಲ್ಲಿ ಕದನ ವಿರಾಮ ಜಾರಿಯಾದ ಬಳಿಕ ಇಂತಹ ದಾಳಿ ನಡೆದಿರುವುದು ವಿಶೇಷ. ಆದರೂ ಗಡಿ ಭಾಗಗಳಲ್ಲಿ ನಿಯತಕಾಲಿಕ ದಾಳಿಗಳು ಮುಂದುವರಿದಿವೆ ಎನ್ನಲಾಗುತ್ತಿದೆ. 2023 ಅಕ್ಟೋಬರ್ ನಂತರ ನಡೆದ ಸಂಘರ್ಷಗಳಲ್ಲಿ ಅನೇಕರು ಬಲಿಯಾಗಿದ್ದು, ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!