ಉದಯವಾಹಿನಿ, ವಾಷಿಂಗ್ಟನ್‌: ಇರಾನ್‌ ಮೇಲೆ ಅಮೆರಿಕ  (USA) ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಅಮೆರಿಕ ತನ್ನ ಬಳಿ ಇರುವ ಅತ್ಯಾಧುನಿಕ ಎಫ್‌-35, ಎಫ್‌-16 ಯುದ್ಧ ವಿಮಾನಗಳನ್ನು ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿದೆ. ಹೌದು. 2003ರ ಇರಾಕ್‌ (Iraq) ವಿರುದ್ಧ ದಾಳಿಗೆ ನಿಯೋಜನೆಗೊಂಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯುದ್ಧ ವಿಮಾನಗಳನ್ನು ಅಮೆರಿಕ ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿದೆ. ಯುದ್ಧ ವಿಮಾನಗಳನ್ನು ತುಂಬಿದ ಎರಡನೇ ವಿಮಾನವಾಹಕ ನೌಕೆಯೂ ಈಗ ಈ ಪ್ರದೇಶಕ್ಕೆ ಬರುತ್ತಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ವರದಿಯ ಪ್ರಕಾರ ಅಮೆರಿಕ ದಾಳಿ ನಡೆಸಲು ಸನ್ನದ್ಧ ರೀತಿಯಲ್ಲಿದ್ದು ಅನುಮತಿಗಾಗಿ ಕಾಯುತ್ತಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಾಳಿಗೆ ಅನುಮತಿ ನೀಡಿದರೆ ದಾಳಿ ನಡೆಸಲಿದೆ.ಇರಾನ್ ಮೇಲೆ ದಾಳಿ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ಟ್ರಂಪ್‌ ಇನ್ನೂ ನಿರ್ಧಾರ ಮಾಡಿಲ್ಲ. ಅನುಮತಿ ನೀಡಿದರೆ ಹಾನಿಯಾಗಿರುವ ಪರಮಾಣು ಸ್ಥಾವರ ಮತ್ತು ಕ್ಷಿಪಣಿಗಳನ್ನಿ ಸಂಗ್ರಹಿಸಿಟ್ಟಿರುವ ಜಾಗಗಳನ್ನು ನಾಶ ಮಾಡಲಿದೆ. ಕೊನೆಗೆ ಅಲ್ಲಿರುವ ಆಡಳಿತವನ್ನು ಉರುಳಿಸುವ ಸಾಧ್ಯತೆಯಿದೆ.
ಫ್ಲೈಟ್-ಟ್ರ್ಯಾಕಿಂಗ್ ಡೇಟಾದ ಪ್ರಕಾರ ಡಜನ್‌ಗಟ್ಟಲೇ ಯುಎಸ್ ಏರ್ ಫೋರ್ಸ್ ಫೈಟರ್ ಜೆಟ್‌ಗಳು, ಕಾರ್ಗೋ ವಿಮಾನಗಳು ಮತ್ತು ಹಲವು ಬೆಂಬಲ ವಿಮಾನಗಳು ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ಸ್ಥಳಾಂತರಗೊಂಡಿರುವುದನ್ನು ತೋರಿಸುತ್ತದೆ.

 

 

Leave a Reply

Your email address will not be published. Required fields are marked *

error: Content is protected !!