
ಉದಯವಾಹಿನಿ, ಜಪಾನ್‌ನ ಇಚಿಕಾವಾ ಸಿಟಿಯ Z00ನಲ್ಲಿ ಜನಿಸಿದ ಸಣ್ಣ ಜಪಾನೀಸ್ ಮಕಾಕ್ ಕಪಿ “ಪಂಚ್” ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಕಥೆಯಾಗಿ ವೈರಲ್ ಆಗಿದೆ. ಮರಿ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ತೊರೆದುಹೋದ ಕಾರಣ, ಕೇವಲ 500 ಗ್ರಾಂ ತೂಕದ ಈ ಕಪಿ ಮೃಗಾಲಯದ ಸಿಬ್ಬಂದಿ ಆರೈಕೆಯಲ್ಲಿ ಬೆಳೆದಿತ್ತು.
ತಾಯಿಯ ಮಮತೆಯ ಕೊರತೆಯಿಂದ ಉಂಟಾದ ಒತ್ತಡವನ್ನು ಕಡಿಮೆ ಮಾಡಲು ಮೃಗಾಲಯದ ಸಿಬ್ಬಂದಿ ಮೃದುವಾದ ಆಟಿಕೆಗಳನ್ನು ನೀಡಿದರು. ಅವುಗಳಲ್ಲಿ ಒರಂಗುಟಾನ್ ಆಕಾರದ ಪ್ಲಷ್ ಆಟಿಕೆಗೆ ಪಂಚ್ ಗೆ ಅಮ್ಮನ ಅನುಭವ ನೀಡಿತ್ತು. ರಾತ್ರಿಯಲ್ಲೂ ಅದನ್ನೇ ಹಿಡಿದು ಮಲಗುತ್ತಿದ್ದ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.
