ಉದಯವಾಹಿನಿ, ಬೀದರ್ : ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆ.ಎನ್.ಯು) ದ ತಾಂತ್ರಿಕ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಬೀದರ ಜಿಲ್ಲೆಯ ಇಸ್ಲಾಂಪುರ ಗ್ರಾಮದ ಗ್ರಾಮೀಣ ಕುಟುಂಬದ ಹಿನ್ನಲೆಯುಳ್ಳ ಡಾ.ಸಂಗಮೇಶ ಮೂಲಗೆ ಅವರು ನೇಮಕಗೊಂಡಿರುವುದಕ್ಕೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಗುರುನಾಥ ರಾಜಗೀರಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
           ಡಾ.ಸಂಗಮೇಶ ಅವರು ಪ್ರಸ್ತುತ ಪಾಂಡಿಚೇರಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತಿದ್ದರು, ಆದರು ಛಲಬಿಡದೆನೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡು ಅತ್ಯಂತ ಕಿರಿಯ ವಯಸ್ಸಿನಲ್ಲಿಯೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳುವ ಮೂಲಕ ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸುವ ಮೂಲಕ ಬೀದರ ಜಿಲ್ಲೆಗೆ ಗೌರವ ತಂದಿರುವುದು ಹೆಮ್ಮೆಯ ವಿಶಯವಾಗಿದೆ.
          ಉನ್ನತ ಶೈಕ್ಷಣಿಕ ಸಾಧನೆ, ಅನುಭವ ಹಾಗೂ ಸೇವಾ ಜೇಷ್ಠತೆಯನ್ನೂ ಪರಿಗಣಿಸಿ ಈ ಅವಕಾಶ ಕೊಡಲಾಗುತ್ತದೆ. ಶೈಕ್ಷಣಿಕವಾಗಿ, ಸಾಮಾಜಿಕ ರಂಗದಲ್ಲಿ, ಅನೇಕ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಇವರು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಇಂಧನ ಬಳಕೆ, ಉಳಿತಾಯ, ಹವಾಮಾನ ಬದಲಾವಣೆ ಹಾಗೂ ಅದರ ಮೌಲ್ಯಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ತನ್ನ ಅವಿರತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದೊಂದಿಗೆ ಉನ್ನತ ಧೇಯದೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವ ಪ್ರತಿಭೆಗಳಿಗೆ ಡಾ.ಸಂಗಮೇಶ ಅವರು ಮಾದರಿಯಾಗಿದ್ದಾರೆ.
      ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಿರಿಯ ವಯಸ್ಸಿನಲ್ಲೇ ಅತ್ಯುನ್ನತ ಹುದ್ದೆಗೆ ಅಯ್ಕೆಯಾಗಿರುವ ಡಾ.ಸಂಗಮೇಶ ಮೂಲಗೆ ಅವರಿಗೆ ಮಾತೃಭೂಮಿಯ ಗುರುನಾಥ ರಾಜಗೀರಾ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!