ಉದಯವಾಹಿನಿ ತಾಳಿಕೋಟಿ: ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಜೀವದ ಹಂಗು ತ್ವರೆದು ವೈರಿ ರಾಷ್ಟçದ ಸೈನಿಕರೊಂದಿಗೆ ಹೋರಾಡಿ ಹುತಾತ್ಮರಾದ ನಮ್ಮ ವೀರ ಸೈನಿಕರ ಶೌರ್ಯ, ಪರಾಕ್ರಮ ಹಾಗೂ ಸಮರ್ಪಣಾಭಾವನೆ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಬ್ರಿಲಿಯಂಟ್ ಶಾಲೆಯ ಆಡಳಿತಾಧಿಕಾರಿ ಎಸ್.ಡಿ. ಕರಜಗಿ ಅವರು ಹೇಳಿದರು.
ಪಟ್ಟಣದ ಪ್ರತಿಷ್ಠಿತ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈಲೇಶ್ವರದ ವತಿಯಿಂದ ೨೪ನೇ ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಭಾರತೀಯರಾದ ನಾವು ಶಾಂತಿಪ್ರೀಯರು ಆದರೆ ಯಾರಾದರೂ ನಮ್ಮ ತಂಟೆಗೆ ಬಂದರೆ ನಾವು ಅವರಿಗೆ ತಕ್ಕ ಉತ್ತರ ಮೀಡಲು ಸಮರ್ಥರಾಗಿದ್ದೇವೆ ಎಂದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮಹಿಬೂಬ ಹೊನ್ನಳ್ಳಿ ಮಾತನಾಡಿ ನಾನು ಬಾಲ್ಯದಲ್ಲಿಯೇ ದೇಶ ಕಾಯುವ ಸೈನಿಕನಾಗಬೇಕೆಂದು ಬಯಸಿದ್ದೆ ತಾಯಿ ಭಾರತಾಂಬೆ ನನ್ನ ಈ ಕನಸು ನನಸಾಗಿಸಿದಳು. ದೇಶಕ್ಕೆ ಗಂಡಾ0ತರ ಬಂದಲ್ಲಿ ನಾನು ನನ್ನ ಎದೆಕೊಟ್ಟು ಹೋರಾಡಿ ಮಡಿಯಲು ಸಿದ್ಧನಾಗಿರುವೆ. ವಿದ್ಯಾರ್ಥಿಗಳ ಬದುಕಿಗೆ ಒಂದು ಸ್ಪಷ್ಟ ಗುರಿ. ನಿರಂತರ ಪ್ರಯತ್ನ ಇದ್ದಲ್ಲಿ ಖಂಡಿತವಾಗಿಯು ಯಶಸ್ಸು ಸಿಗುವುದು ಎಂದರು. ಶಿಕ್ಷಕ ಲಕ್ಷö್ಮಣ ಪಿರಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವಾರು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹೇಳಿದರು.
ಶ್ರೀ ಮಾರುತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಬಿ. ಮಡಿವಾಳರ ಅವರು ಕಾರ್ಗಿಲ್ ವಿಜಯದ ಕುರಿತು ಮಾತನಾಡಿದರು. ಯಲ್ಲಾಲಿಂಗ ಬಿರಾದಾರ ಹಾಗೂ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇದೇ ಸಂದರ್ಭದಲ್ಲಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಭಾರಿ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
