ಉದಯವಾಹಿನಿ, ಬೆಂಗಳೂರು: ಒಳ ಮೀಸಲಾತಿಯಲ್ಲಿರೋ ಗೊಂದಲ ನಿವಾರಣೆ ಮಾಡುವಂತೆ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಮಾಜಿ ಡಿಸಿಎಂ, ಸಂಸದ ಗೋವಿಂದ್ ಕಾರಜೋಳ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ದೂರಿನ ಬಳಿಕ ಪ್ರತಿಕ್ರಿಯೆ ನೀಡಿದ ಗೋವಿಂದ್ ಕಾರಜೋಳ, ಸರ್ಕಾರ ಸಮರ್ಪಕವಾಗಿ ಒಳ ಮೀಸಲಾತಿ ಕೊಟ್ಟಿಲ್ಲ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಆಗಿದೆ. 25-30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡಿದ್ರು. ಸಿದ್ದರಾಮಯ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಮಾಡಿದೆ. ಯಾವುದೂ ನ್ಯಾಯಯುತವಾಗಿ ಮಾಡಿಲ್ಲ ಅಲೆಮಾರಿಗಳಿಗೆ ಅನ್ಯಾಯ ಆಗಿದೆ ಅಂತ ಕಿಡಿಕಾರಿದರು.
ಸರ್ಕಾರ ನಾಗಮೋಗನ್ ದಾಸ್, ಮಾಧುಸ್ವಾಮಿ ಯಾವುದು ವರದಿ ಜಾರಿ ಮಾಡಿಲ್ಲ. ಅಲೆಮಾರಿ ಜನಾಂಗದವರಿಗೆ ಸರ್ಕಾರ ಅನ್ಯಾಯ ಮಾಡಿದೆ. ಸಿದ್ದರಾಮಯ್ಯ ಸರ್ಕಾರ ದೊಡ್ಡ ಅನ್ಯಾಯ ಮಾಡಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. 2.85 ಲಕ್ಷ ಹುದ್ದೆ ಖಾಲಿ ಇವೆ, ಒಳ ಮೀಸಲಾತಿ ಅಂತ ಗೊಂದಲ ಸೃಷ್ಟಿ ಮಾಡಿ ನೇಮಕಾತಿ ಮಾಡ್ತಿಲ್ಲ. ನೇಮಕಾತಿ ಪರವಾಗಿ ಬಿಜೆಪಿ ಇದೆ. ಕೂಡಲೇ ನೇಮಕಾತಿ ಪ್ರಾರಂಭ ಮಾಡಬೇಕು ಅಂದರು.
ಸುಪ್ರೀಂ ಕೋರ್ಟ್ ಆದೇಶ ಸರ್ಕಾರ ಪಾಲನೆ ಮಾಡಬೇಕು. ಒಳ ಮೀಸಲಾತಿ ವರದಿ ಗಮನ ಇಟ್ಟುಕೊಂಡು ಅನುಷ್ಠಾನ ಮಾಡಬೇಕಿತ್ತು. ಆದ್ರೆ ಚರ್ಚೆ ಇಲ್ಲದೇ ಬಿಲ್ ಪಾಸ್ ಮಾಡಿರೋದು ಸರಿಯಲ್ಲ. SCSCP-TSP ಹಣ ಗ್ಯಾರಂಟಿಗೆ ಬಳಕೆ ಮಾಡಿದೆ. ಇದು ಸರಿಯಲ್ಲ, ಸರ್ಕಾರ ದಲಿತರ ಹಣ ದಲಿತರಿಗೆ ಬಳಕೆ ಮಾಡಬೇಕು ಇಲ್ಲದೆ ಹೋದ್ರೆ ಹೋರಾಟ ಮಾಡ್ತೀವಿ. ರಾಜ್ಯಪಾಲರಿಗೆ ದೂರ ಕೊಡಲಾಗಿದೆ. ಅಲೆಮಾರಿಗಳಿಗೆ 1% ಮೀಸಲಾತಿ ಕೊಡಬೇಕು. ನೇಮಕಾತಿ ಪ್ರಕ್ರಿಯೆ ನಿಲ್ಲಿಸಬಾರದು, ಬಡ್ತಿ ಕೊಡೋದು ನಿಲ್ಲಿಸಬಾರದು ಅಂತ ಆಗ್ರಹ ಮಾಡಿದ್ರು.
