ಉದಯವಾಹಿನಿ, ಚೆನ್ನೈ: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಅಂತಿಮ ಪಟ್ಟಿ ಸೋಮವಾರ ಪ್ರಕಟಗೊಂಡಿದೆ. ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಅಂತಿಮ ಪಟ್ಟಿಯಲ್ಲಿ ಒಟ್ಟು 5,67,07,380 ಮತದಾರರಿದ್ದಾರೆ. ಈ ಪೈಕಿ 28,960,838 ಮಹಿಳೆಯರು ಮತ್ತು 27,738,925 ಪುರುಷ ಮತದಾರರು ಇದ್ದಾರೆ. 18-19 ವರ್ಷ ವಯಸ್ಸಿನ ಮತದಾರರ ಸಂಖ್ಯೆ 12.51 ಲಕ್ಷವಾಗಿದ್ದು, ಇದರಲ್ಲಿ 7.40 ಲಕ್ಷ ಯುವಜನರನ್ನ ʻಸರ್‌ʼ ಅಭಿಯಾನದ ವೇಳೆ ನೋಂದಾಯಿಸಲಾಗಿದೆ. ಆದ್ರೆ SIR ಅಭಿಯಾನದ ನಂತರ ರಾಜ್ಯದಲ್ಲಿ 97.37 ಲಕ್ಷ ಮತದಾರರ ಹೆಸರುಗಳನ್ನ ಪಟ್ಟಿಯಿಂದ ಡಿಲೀಟ್‌ ಮಾಡಲಾಗಿದ್ದು, ಮತದಾರರ ಸಂಖ್ಯೆ ಶೇ. 11.5 ರಷ್ಟು ಕುಸಿತವಾಗಿದೆ ಎಂದು ಅರ್ಚನಾ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.

34 ಲಕ್ಷ ಅರ್ಜಿ ಸಲ್ಲಿಕೆ: ʻಸರ್‌ʼ ಅಭಿಯಾನ ಶುರುವಾದ ನಂತರ ಮತದಾರರ ಪಟ್ಟಿಗೆ ಹೆಸರು ಸೇರಿಸಲು 34,75,717 ಅರ್ಜಿಗಳು ಆಫ್‌ಲೈನ್‌ ಮತ್ತು ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿತ್ತು. ಆದ್ರೆ 2025 ರ ಡಿಸೆಂಬರ್ 19 ರಿಂದ ಜನವರಿ 30 ರ ವರೆಗಿನ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ 27.53 ಲಕ್ಷ ಅರ್ಹ ಮತದಾರರನ್ನ ಪಟ್ಟಿಗೆ ಸೇರಿಸಲಾಗಿದೆ. ಇದೇ ವೇಳೆ 4.23 ಲಕ್ಷ ಅನರ್ಹ ಮತದಾರರ ಹೆಸರನ್ನ ಡಿಲೀಟ್‌ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!