ಉದಯವಾಹಿನಿ ದೇವರಹಿಪ್ಪರಗಿ: ವೈಚಾರಿಕತೆ ಸಮಾಜವನ್ನು ತಿದ್ದುವ ಮುಖ್ಯವಾದ ಅಸ್ತ್ರವಾಗಿದೆ. ಈ ವೈಚಾರಿಕತೆ  ಒಬ್ಬ ವ್ಯಕ್ತಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಇಲ್ಲವೇ ಅವನ ವೈಯಕ್ತಿಕ ಬದುಕಿನ ಚಿಂತನೆಗೆ ಎಡೆಮಾಡಿಕೊಡುತ್ತದೆ. ಆದ್ದರಿಂದ ವೈಚಾರಿಕತೆಯಿಂದ ಮಧ್ಯವರ್ಜನೆ ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ ಎಸ್ ಎನ್ ಬಸವರಡ್ಡಿ ಹೇಳಿದರು.
     ಪಟ್ಟಣದ 1008 ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ. ಬಿಸಿ ಟ್ರಸ್ಟ್ ಸಿಂದಗಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಿಸಿ ಟ್ರಸ್ಟ್ ಬೆಳ್ತಂಗಡಿ. ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ದೇವರಹಿಪ್ಪರಗಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ ಸುಮಾರು 8ದಿನಗಳ ಕಾಲ ಆಯೋಜಿಸಲಾಗಿರುವ ಮಧ್ಯವರ್ಜನ ಶಿಬಿರದ 1699ನೇ ಮತ್ತೆ ವರ್ಜನೆ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವ್ಯಸನಿಗಳು ಸತ್ಸಂಗ, ಆಧ್ಯಾತ್ಮ, ಶರಣರ ವಚನಗಳನ್ನು, ದಾಸರ ಪದಗಳನ್ನು ಹಾಗೂ ಸಂತರ ಅಭಂಗಗಳನ್ನು ಮನನ ಮಾಡಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು. ನಂತರ ಡಾ ಮಂಜುನಾಥ್ ಮಸಲಿ ಅವರು ಮಾತನಾಡಿ ಶಿಬಿರಾರ್ಥಿಗಳಿಗೆ ವೈದ್ಯಕೀಯ ಸಲಹೆ ನೀಡಿದರು.
    ಇದೇ ಸಂದರ್ಭದಲ್ಲಿ ಡಾ ಆರ್ ಆರ್ ನಾಯಕ, ಚನ್ನವೀರ ಕುದುರಿ,ಮಿಂಚಿನಾಳ ಸರ್,ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ದ ಗಿರೀಶ್, ದಿವಾಕರ್, ಬಾಬುರಾವ್ ಹಾಗೂ ವ್ಯಸನಿಗಳ ಕುಟುಂಬಸ್ಥರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!