ಉದಯವಾಹಿನಿ ಮಾಲೂರು: ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಒಳ್ಳೆಯ ಅಂಕಗಳನ್ನುಗಳಿಸಿ ಉತ್ತಮ ಪ್ರಜೆಗಳಾಗಬೇಕು ಎಂದು ಮುರಳಿ ತಿಳಿಸಿದರು.
ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾಮದ ರಮಾ ಮಾಧವ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ  ಹಮ್ಮಿಕೊಂಡಿದ್ದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದಾನಿಗಳಾದ ಕೃಷ್ಣಪ್ಪ ಮತ್ತು ಮಕ್ಕಳು ಗುಂಡೂರು ಚೇತನ್ ಕುಮಾರ್, ಮಂಜುನಾಥ, ಮುರಳಿ, ಬಾಬು, ನಂಜೇಗೌಡ ಇವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ  ನೀಡಿದರು. ನಿಮ್ಮ ಶಾಲೆಗೆ ಸದಾ ನಮ್ಮ ಬೆಂಬಲ ಇರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ಪಾಠಗಳನ್ನು ಕೇಳಿ ಉತ್ತಮ ಪ್ರಜೆಗಳಾಗಬೇಕು ಎಂದು ಅವರು ಎಂದರು.ಈ ಸಂದರ್ಭದಲ್ಲಿ ದಾನಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು‌ ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಜಿ.ವಿದ್ಯಾಧರಿ, ದೈಹಿಕ ಶಿಕ್ಷಣ ಶಿಕ್ಷಕರಾದ ಜಿ.ಸಿ.ವೆಂಕಟಸ್ವಾಮಿ, ಶಿಕ್ಷಕರಾದ ಕೃಷ್ಣಮೂರ್ತಿ, ತಿಮ್ಮರಾಯಪ್ಪ, ಸಾಗರ್.ಬಿ‌.ಎಲ್‌, ನಾಗರಾಜ್ ಮತ್ತು ಸಿಬ್ಬಂದಿ ರಾಜಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!