ಉದಯವಾಹಿನಿ, ಕಟಕ್ (ಒಡಿಶಾ): 12 ವರ್ಷದ ಹಿಂದೆ ಬಟ್ಟೆಗಳ ಇಸ್ತ್ರಿ ಮಾಡಿ ಬದುಕು ಸಾಗಿಸುತ್ತಿದ್ದ ಬಾಲಕೃಷ್ಣ ಸೇಥಿ ಅವರಿಗೆ ಅಂದೊಂದೇ ಜೀವನೋಪಾಯ ಆಗಿತ್ತು. ಹೀಗೆ ಒಮ್ಮೆ ಅವರು ಶವದ ಮೆರವಣಿಗೆಯಲ್ಲಿ ಚಟ್ಟದ ಅಸ್ತವ್ಯಸ್ತದಿಂದ ಮೃತದೇಹ ಬೀಳುವುದನ್ನು ಕಂಡರು. ಈ ದೃಶ್ಯ ಬಾಲಕೃಷ್ಣ ಅವರ ಮನಸಿಗೆ ಗಾಸಿ ಉಂಟುಮಾಡಿತು. ಜೀವನದ ಕೊನೆಯ ಪಯಣದಲ್ಲಿ ಶವಗಳಿಗೂ ಘನತೆಯ ಪ್ರಯಾಣ ಇರಬೇಕು ಎಂದು ನಿರ್ಧರಿಸಿದ ಅವರು ಅಂದಿನಿಂದ ಚಟ್ಟದ ಸಿದ್ಧತೆಯಲ್ಲಿ ತೊಡಗಿಸಿಕೊಂಡರು.
ಸಾವು ಎಂಬುದು ದುಃಖಕರ ಸಂಗತಿಯಾಗಿದ್ದು, ಇದು ಕುಟುಂಬವನ್ನು ವಿಚಲಿತಗೊಳಿಸುತ್ತದೆ. ಆಚರಣೆಗಳು ಭಾರದಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಅಂತಿಮ ವಿಧಿವಿಧಾನವನ್ನು ನಡೆಸುವ ಕುರಿತು ಯಾರನ್ನು ಸಂಪರ್ಕಿಸಬೇಕು ಎಂಬುದು ಜನರಿಗೆ ತಿಳಿಯುವುದಿಲ್ಲ. ಅಂತಹ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಯಾರಾದರೂ ಸಹಾಯ ಮಾಡಲು ಸಾಧ್ಯವಾದರೆ, ಕನಿಷ್ಠ ಪಕ್ಷ ಅವರಿಗೆ ಎದುರಾಗುವ ಯಾವುದಾದರೂ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಸೇಥಿ. ಸೇಥಿ, ಯಾರದಾದರೂ ಮನೆಯಲ್ಲಿ ನಿಧನದ ದುಃಖದ ವಾತಾವರಣ ನಿರ್ಮಾಣವಾದರೆ, ಸೈಕಲ್ ತುಳಿಯುತ್ತಾ, ಅವರ ಮನೆಯನ್ನು ತಲುಪುತ್ತಾರೆ. ಜೊತೆಗೆ ತಮ್ಮೊಂದಿಗೆ ಕೊಂಡೊಯ್ಯುವ ಹರಿತ ಸಾಧನ, ಬಿದಿರಿನ ಕೋಲು, ಹಗ್ಗದಿಂದ ಚಟ್ಟ ತಯಾರಿಸುತ್ತಾರೆ. ಯಾರಾದರೂ ತಮ್ಮ ಸಹಾಯವನ್ನು ಯಾಚಿಸುವ ಮೊದಲೇ ಅಗತ್ಯ ಪರಿಕರದೊಂದಿಗೆ ಅಲ್ಲಿ ಅಗತ್ಯ ಸೇವೆ ನೀಡುವುದು ನನ್ನ ಕರ್ತವ್ಯವಾಗಿದೆ ಎನ್ನುತ್ತಾರೆ ಅವರು.
ಚಟ್ಟ ತಯಾರಿಕೆಯಿಂದ ಮೃತದೇಹವನ್ನು ಸ್ಮಶಾನದವರೆಗೆ ಹೊತ್ತು ಸಾಗುವುದು. ಚಿತಾಭಸ್ಮವನ್ನು ಸಂಗ್ರಹಿಸುವುದರವರೆಗೆ ಮೃತ ವ್ಯಕ್ತಿಯು ತನ್ನ ಸ್ವಂತ ಸಂಬಂಧಿಯಂತೆ ಪ್ರತಿಯೊಂದು ಅಂತಿಮ ವಿಧಿಯನ್ನು ನಿರ್ವಹಿಸುತ್ತಾರೆ.
ಕಟಕ್‌ನ ಡ್ಯೂಲ್ ಸಾಹಿಯಲ್ಲಿ ವಾಸಿಸುವ 58 ವರ್ಷದ ಸೇಥಿ, ತಮ್ಮ ಗಲ್ಲಿಯಲ್ಲಿ ಅಥವಾ ತಮ್ಮ ತಾತ್ಕಾಲಿಕ ಅಂಗಡಿಯಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿರುತ್ತಾರೆ. ಅವರಿಗೆ ಒಂದು ಫೋನ್ ಕರೆ ಬಂದರೆ ಸಾಕು ಹಗಲು ರಾತ್ರಿ, ಮಳೆ, ಚಳಿ- ಬಿಸಿಲನ್ನು ಲೆಕ್ಕಿಸದೆ ಅವರು ಸಹಾಯಕ್ಕೆ ಮುಂದಾಗುತ್ತಾರೆ. ಕಳೆದ 10 ರಿಂದ 12 ವರ್ಷದಿಂದ ಇದನ್ನೇ ತಮ್ಮ ದಿನಚರಿಯಾಗಿರಿಸಿಕೊಂಡಿರುವ ಅವರು, ಬೌರಿ ಭಾಯ್ ಎಂದೇ ಸ್ಥಳೀಯವಾಗಿ ಚಿರಪರಿಚಿತರಾಗಿದ್ದಾರೆ. ಈ ಕೆಲಸವನ್ನು ಯಾವುದೇ ಜಾತಿ ಅಥವಾ ಸಮುದಾಯ ನೋಡದೆ ಎಲ್ಲರಿಗೂ ಉಚಿತವಾಗಿ ನೀಡುತ್ತಿರುವುದು ಅವರ ವಿಶೇಷ ಗುಣವಾಗಿದೆ. ಬೆಳಗಿನ ಸಮಯದಲ್ಲಿ ನಗರದಲ್ಲಿ ಯಾರಾದರೂ ಅಸುನೀಗಿದರೆ, ನನಗೆ ತಿಳಿಯುತ್ತೆ. ಆದರೆ, ರಾತ್ರಿ ಸಮಯದಲ್ಲೂ ಜನರು ನನಗೆ ಕರೆ ಮಾಡುತ್ತಾರೆ. ಈ ಕೆಲಸವನ್ನು ನಾನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದೇನೆ ಎಂದು ತಿಳಿದ ಮೇಲೆ ಅವರು ನನ್ನನ್ನು ಸಂಪರ್ಕಿಸುತ್ತಾರೆ. ಇನ್ನು ಅಂತ್ಯ ಸಂಸ್ಕಾರದ ಕುರಿತು ಯಾರಾದರೂ ಕೇಳಿದರೆ, ಆಚರಣೆಯ ಮಾರ್ಗದರ್ಶನವನ್ನು ಅವರು ನೀಡುತ್ತಾರೆ.
