
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ತಹಶೀಲ್ದಾರ್ ಶ್ರೀಮತಿ ಕವಿತಾ ಆರ್ ಅವರನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರ ಜಾಗಕ್ಕೆ ಸಿಂದಗಿ ಗ್ರೇಡ್ -2 ತಹಶೀಲ್ದಾರ್ ಪ್ರಕಾಶ ಬಸವಂತಪ್ಪ ಸಿಂದಗಿ ಅವರನ್ನು ನಿಯೋಜಿಸಲಾಗಿದೆ. ನೂತನ ಕಾಂಗ್ರೆಸ್ ಸರ್ಕಾರ ಐಎಎಸ್ ಐಪಿಎಸ್ ಹಂತದ ಅಭ್ಯರ್ಥಿಗಳ ವರ್ಗಾವಣೆ ಬಳಿಕ ಇದೀಗ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಸಿದೆ. ಶುಕ್ರವಾರದಂದು ತಹಶೀಲ್ದಾರ್ ಗ್ರೇಡ್ -1 ಹಾಗೂ ಗ್ರೇಡ್ -2ಹಂತದ 46ಅಧಿಕಾರಿಗಳಲ್ಲಿ ಜಿಲ್ಲೆಯ 4ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಿಧಾನಸಭಾ ಚುನಾವಣೆಯ ಕಾರ್ಯ ನಿರ್ವಹಿಸಲು ಆಗಮಿಸಿದ ತಹಶೀಲ್ದಾರ್ ಶ್ರೀಮತಿ ಕವಿತಾ ಆರ್ ಅವರು ತಮ್ಮ ಕಡಿಮೆ ಸಮಯದಲ್ಲಿ ರೈತರ, ಮಹಿಳೆಯರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರಿಗೆ ಹತ್ತಿರವಾಗಿದ್ದರು.ಇವಾಗ ವಿಜಯಪುರಕ್ಕೆ ವರ್ಗಾವಣೆ ಆಗಿದ್ದಾರೆ.
