ಉದಯವಾಹಿನಿ, ದೇಹದ ಸೂಕ್ಷ್ಮ ಭಾಗಗಳಲ್ಲಿ ಕಣ್ಣು ಪ್ರಮುಖವಾದದ್ದು, ಕಣ್ಣು ನಿರಂತರವಾಗಿ ಬೆಳಕು, ಆಮ್ಲಜನಕ ಹಾಗೂ ಪರಿಸರ ಒತ್ತಡಗಳಿಗೆ ಒಳಗಾಗುತ್ತದೆ. ಇದು ʻಆಕ್ಸಿಡೇಟಿವ್ʼ ಹಾನಿ ಹಾಗೂ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕಣ್ಣಿನ ʻಮ್ಯಾಕ್ಯುಲರ್ʼ ಅವನತಿ ಹಾಗೂ ಶುಷ್ಕನೇತ್ರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ನಮ್ಮ ದೈನಂದಿನ ಆಹಾರಗಳ ಆಯ್ಕೆ, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಕರಣದಲ್ಲಿ ನಡೆದಿದ್ದೇ ಬೇರೆ…
ಹೌದು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಜೈಲಿನಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದಾಗಿನಿಂದಲೂ ಹೊಸ ಹೊಸ ವಿವಾದಗಳು ಸೃಷ್ಟಿಯಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ತಮ್ಮ ಕಣ್ಣುಗಳನ್ನ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಹರಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಈ ಬೆನ್ನಲ್ಲೇ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಹೇಳಿದ್ದರು.
ಆದ್ರೂ ಇಮ್ರಾನ್ ಖಾನ್ ಕಣ್ಣು ಕಳೆದುಕೊಂಡ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದವು, ಜೈಲಿನಲ್ಲಿ ಸೌಲಭ್ಯ ಒದಗಿಸದ ಬಗ್ಗೆ ಕಳವಳ ಸೃಷ್ಟಿಯಾಗಿದ್ದವು. ಅಡಿಯಾಲ ಜೈಲಿನಲ್ಲಿ ಸುಮಾರು 3 ವರ್ಷಗಳ ಕಾಲ ವೈದ್ಯಕೀಯ ಚಿಕಿತ್ಸೆ ವಿಳಂಬವಾದ ಕಾರಣ, ಇಮ್ರಾನ್ ಖಾನ್ ಅವರ ಬಲಗಣ್ಣಿನ ಸುಮಾರು 85% ದೃಷ್ಟಿ ಕಳೆದುಕೊಂಡಿದ್ದಾರೆ. ಇನ್ನು, ಇಮ್ರಾನ್ ಖಾನ್ ಅವರು 2025 ಅಕ್ಟೋಬರ್ ನಿಂದಲೂ ನಿರಂತರವಾಗಿ ದೃಷ್ಟಿ ಮಸುಕಾಗುವುದನ್ನು ಅನುಭವಿಸಿದ್ದು, ಈ ವಿಚಾರವನ್ನು ಜೈಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಒದಗಿಸದೇ, ದೃಷ್ಟಿ ಕ್ಷೀಣವಾಗಿದೆ. ಇದರಿಂದ ಇಮ್ರಾನ್ ಖಾನ್ ಅವರ ಕಣ್ಣು ಹೆಪ್ಪುಗಟ್ಟಿರುವುದು ಕಂಡಿದ್ದು, ಕೇವಲ 15% ದೃಷ್ಟಿ ಉಳಿದಿದೆ.
