ಉದಯವಾಹಿನಿ, ಬ್ರೊಕೊಲಿಯನ್ನು ಸೂಪರ್‌ಫುಡ್ ಎಂದು ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವ ವಯಸ್ಕರಿಗೆ ಇದು ಅತ್ಯುತ್ತಮ ಉಪಹಾರ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ಬ್ರೊಕೊಲಿ ದೋಸೆ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ನಿಮ್ಮ ಮಕ್ಕಳಿಗೆ, ಮನೆಯವರಿಗೆ ಈ ದೋಸೆಯನ್ನು ಒಂದ್ಸಲ ಮಾಡಿಕೊಡಿ.
ಬೇಕಾಗುವ ಸಾಮಗ್ರಿಗಳು:
ಬ್ರೊಕೊಲಿ ತುಂಡುಗಳು – ಸ್ವಲ್ಪ
ಬಾಂಬೆ ರವೆ – 1 ಕಪ್
ಮೊಸರು – 1 ಕಪ್
ಹಸಿಮೆಣಸು – ಅರ್ಧ ಕಪ್
ಈರುಳ್ಳಿ – 1
ತುರಿದ ಶುಂಠಿ – 1
ಜೀರಿಗೆ – 1 ಚಮಚ
ಉಪ್ಪು – ಅರ್ಧ ಚಮಚ
ತುಪ್ಪ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲು ಬ್ರೊಕೊಲಿಯನ್ನು ಉಪ್ಪು ನೀರಿನಲ್ಲಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಬಳಿಕ ಸ್ವಲ್ಪ ಸಮಯದವರೆಗೆ ಆವಿಯಲ್ಲಿ ಬೇಯಿಸಿ.
* ಈಗ ಒಂದು ಕಪ್ ರವೆಗೆ ಮೊಸರು ಮತ್ತು ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಮತ್ತು ಗಂಟಿಲ್ಲದAತೆ ಸುಮಾರು 15 ನಿಮಿಷಗಳ ಕಾಲ ನೆನೆಯಲು ಬಿಡಿ.
* ಈಗ ಈ ಹಿಟ್ಟಿಗೆ ಮೊದಲೇ ತಯಾರಿಸಿದ ಬ್ರೊಕೊಲಿ (ತುರಿದ ಅಥವಾ ಪೇಸ್ಟ್), ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ತುರಿದ ಶುಂಠಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ತೆಳುವಾಗಬಾರದು.
* ನಂತರ ಒಲೆಯ ಮೇಲೆ ಪ್ಯಾನ್ ಬಿಸಿ ಮಾಡಿ. ಪ್ಯಾನ್ ಬಿಸಿಯಾದ ನಂತರ, ಸ್ವಲ್ಪ ಎಣ್ಣೆ ಸೇರಿಸಿ, ಹಿಟ್ಟನ್ನು ತೆಗೆದುಕೊಂಡು ಅದನ್ನು ದೋಸೆಯಂತೆ ತೆಳುವಾಗಿ ಹರಡಿ.
* ಬಳಿಕ ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸವರಿ. ಮಧ್ಯಮ ಉರಿಯಲ್ಲಿ ದೋಸೆ ಎರಡೂ ಬದಿಗಳು ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿದರೆ ದೋಸೆ ಸವಿಯಲು ಸಿದ್ಧ.

Leave a Reply

Your email address will not be published. Required fields are marked *

error: Content is protected !!