ಉದಯವಾಹಿನಿ, ವಾಷಿಂಗ್ಟನ್ : ಸುಮಾರು 2 ವರ್ಷದ ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ತಯಾರಿಕೆಗೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. 100 ಬಿಲಿಯನ್ ಡಾಲರ್ ಎಂದರೆ ಸುಮಾರು 9 ಲಕ್ಷ ಕೋಟಿ ರೂ. ಆ್ಯಪಲ್ ಕಂಪನಿಯ ಈ ನಿರ್ಧಾರ ಸಾಧಾರಣದ್ದಾಗಿರಲಿಲ್ಲ. ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಂಟೇ ಬೇಡ ಎಂದು ಸುಮ್ಮನ್ನಿದ್ದ ಆ್ಯಪಲ್ ದಿಢೀರನೇ ನಿರ್ಧಾರ ಬದಲಿಸಿದ್ದ ಆಶ್ಚರ್ಯಪಡಬೇಕಾದ ಸಂಗತಿ. ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಟಿಮ್ ಕುಕ್ ಒಳಗಾಗಿರಬಹುದು ಎನ್ನುವುದಕ್ಕೆ ಆಗಿನ್ನೂ ಟ್ರಂಪ್ ಅಧ್ಯಕ್ಷರಾಗಿರಲಿಲ್ಲ. ಹಾಗಿದ್ದರೆ ಆ್ಯಪಲ್ ಕಂಪನಿಯ ಆ ನಿರ್ಧಾರಕ್ಕೆ ಏನು ಕಾರಣ? ವರದಿಗಳ ಪ್ರಕಾರ, ರಹಸ್ಯ ಸಭೆಯೊಂದರಲ್ಲಿ ಟಿಮ್ ಕುಕ್​ಗೆ ಸಿಐಎ ಹೇಳಿದ ಸಂಗತಿಯೊಂದು ಇದಕ್ಕೆ ಕಾರಣ ಎನ್ನಲಾಗಿದೆ.

ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದಾಗಿ ಘೋಷಣೆ ಮಾಡುವ ಸ್ವಲ್ಪ ಮೊದಲು, 2023ರ ಮಧ್ಯಭಾಗದಲ್ಲಿ ಕೆಲ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳ ಜೊತೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ರಹಸ್ಯ ಸಭೆ ನಡೆಸಿತ್ತು. ಆ್ಯಪಲ್ ಸಿಇಒ ಟಿಮ್ ಕುಕ್, ಎನ್​ವಿಡಿಯಾದ ಜೆನ್ಸೆನ್ ಹುವಾಂಗ್, ಎಎಂಡಿಯ ಲಿಸಾ ಸು ಅವರು ಈ ಸಭೆಯಲ್ಲಿ ಇದ್ದರು. ಕ್ವಾಲ್​ಕಾಮ್​ನ ಕ್ರಿಸ್ಟಿಯಾನೋ ಅಮೋನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಚೀನಾ 2027ರಲ್ಲಿ ತೈವಾನ್ ಅನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಸಿಐಎ ಅಧಿಕಾರಿಗಳು ಆ ಸಭೆಯಲ್ಲಿ ಬಿಚ್ಚಿಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!