ಉದಯವಾಹಿನಿ : ಬೇಸಿಗೆ ಬರುತ್ತಿದೆ ಎಂದರೆ ಬಾಯಾರಿಕೆಯೂ ಜಾಸ್ತಿ ಆಗುತ್ತಲೇ ಇರುತ್ತೆ. ನೆತ್ತಿ ಬಿಸಿಲು ಸುಡುತ್ತಿದ್ರೆ ಮನಸು ಕಲ್ಲಂಗಡಿ, ಎಳನೀರು, ನಿಂಬೆ ಜೂಸ್‌, ಕರ್ಬೂಜ ಕಡೆಗೆ ಎಳೆಯುತ್ತೆ. ಆದ್ರೆ ಇವುಗಳ ಬೆಲೆ ಏರಿಕೆ ಆಗುವುದರಿಂದ ಖರೀದಿಗೆ ಒಮ್ಮೊಮ್ಮೆ ಹಿಂದೇಟು ಹಾಕಬಹುದು. ಹಾಗಾಗಿ ನಿಂಬೆ ಹಣ್ಣಿನ ರಸವನ್ನು ಜಾಸ್ತಿ ದಿನ ಸಂಗ್ರಹಿಸಿಡಬಹುದು. ಬಿಸಿಲು ಹೆಚ್ಚಾದಂತೆ ಹಣ್ಣುಗಳ ಬೆಲೆ ಕೂಡ ಗಗನಕ್ಕೇರುತ್ತವೆ. ಇದರಿಂದ ಅವುಗಳನ್ನು ಖರೀದಿ ಮಾಡುವುದು ಕೊಂಚ ಕಷ್ಟ ಎನಿಸಬಹುದು. ಇದರಿಂದ ತಣ್ಣನೆಯ ಜೂಸ್‌ ಕುಡಿಯಬೇಕೆಂದ್ರೆ ನಿಂಬೆ ಹಣ್ಣಿನ ರಸವನ್ನು ಕೆಡದಂತೆ ಈ ಮಾದರಿಯಲ್ಲಿ ಸಂಗ್ರಹಿಸಿಡಬಹುದು. ಇದು 3 ರಿಂದ 4 ತಿಂಗಳು ತಾಜಾವಾಗಿ ಇರುತ್ತದೆ.
ಮಾರ್ಕೆಟ್‌ ಅಥವಾ ಅಂಗಡಿಗಳಲ್ಲಿ ಕಲೆಗಳಿಲ್ಲದ ಕೊಂಚ ಹಸಿರು ಇರುವ ನಿಂಬೆಹಣ್ಣುಗಳನ್ನು ತಂದು, ಮನೆಯಲ್ಲಿ ಚೆನ್ನಾಗಿ ತೊಳೆದು ಸ್ವಲ್ಪ ಒಣಗಿಸಬೇಕು. ಬಳಿಕ ಅವುಗಳನ್ನು ಕೊಯ್ದು ರಸವನ್ನು ತೆಗೆಯಬೇಕು. ಈ ನಿಂಬೆ ರಸವನ್ನು ಜರಡಿ ಅಥವಾ ತೆಳುವಾದ ಬಟ್ಟೆಯಿಂದ ಸೋಸಬೇಕು.
ಸೋಸಿರುವ ಈ ರಸವನ್ನು ನೀರಿನ ಹನಿಗಳು ಇಲ್ಲದ, ಶುದ್ಧವಾದ ಗಾಜಿನ ಬಾಟಲಿಯಲ್ಲಿ ತುಂಬಿಸಬೇಕು. ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ನಿಂಬೆ ರಸ ಇರುವ ಬಾಟಲಿಯನ್ನು ಸೂರ್ಯನ ಬೆಳಕಿನಲ್ಲಿ ಇಡಬೇಕು. ಹೀಗೆ ಸುಮಾರು 15 ದಿನ ಮಾಡಿದರೆ, 3 ರಿಂದ 4 ತಿಂಗಳು ನಿಂಬೆ ರಸ ಹಾಳಾಗುವುದಿಲ್ಲ.  ಇನ್ನೊಂದು ವಿಧಾನದಲ್ಲಿ ನಿಂಬೆ ರಸವನ್ನು ಈ ಮಾದರಿಯಲ್ಲಿ ಸಂಗ್ರಹಿಸಬಹುದು. ನಿಂಬೆ ರಸಕ್ಕೆ ಸ್ವಲ್ಪ ಸಕ್ಕರೆ ಸೇರಿಸುವುದರಿಂದ ಅದರ ಶೆಲ್ಫ್‌ ಜೀವಿತಾವಧಿ ಹೆಚ್ಚಾಗುತ್ತದೆ. ನಿಂಬೆ ರಸದೊಂದಿಗೆ ಸಕ್ಕರೆಯನ್ನು ಮಿಶ್ರಮಾಡಿದ್ದನ್ನ ಗಾಜಿನ ಬಾಟಲಿಗೆ ಸುರಿಯಬೇಕು. ಅದರಂತೆ ಬಿಸಿಲಿನಲ್ಲಿ ಕೆಲವು ದಿನಗಳ ಇಡಬೇಕು. ಹೀಗೆ ಮಾಡುವುದರಿಂದ ಸಕ್ಕರೆ ನಿಂಬೆ ರಸದ ಪರಿಮಳ ಕಾಪಾಡುತ್ತೆ. ರುಚಿಯೂ ತಾಜಾವಾಗಿರುತ್ತೆ.

Leave a Reply

Your email address will not be published. Required fields are marked *

error: Content is protected !!