ಉದಯವಾಹಿನಿ, ಹಿರಿಯೂರು/ಯರಬಳ್ಳಿ: ಕುಟುಂಬ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಹಣಕಾಸು ಸಂಸ್ಕೃತಿ ಉಳಿತಾಯದ ಅಭ್ಯಾಸ ಬಂದರೆ ಕಲಿಸಿದರೆ ಮುಂದೆ ಉತ್ತಮ ಆರ್ಥಿಕ ನಿರ್ವಹಣೆ ಮಾಡುವ ನಾಗರಿಕರಾಗಿ ಬೆಳೆಯುತ್ತಾರೆ ಎಂದು ಯರಬಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮೋಹನ್ ಅಭಿಪ್ರಾಯ ಪಟ್ಟಿದ್ದಾರೆ.  ತಾಲ್ಲೂಕಿನ ಯರಬಳ್ಳಿ ಗ್ರಾಮದ ಸರ್ಕಾರಿ ಪಿಎಂಶ್ರೀ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಆರಂಭಿಸಲು ಉದ್ಧೇಶಿಸಿರುವ ಮಕ್ಕಳ ಬ್ಯಾಂಕ್ (ಪಿಗ್ಗಿ ಬ್ಯಾಂಕ್) ಉದ್ಘಾಟಿಸಿ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು “ಶಾಲೆಗಳಲ್ಲಿ ಸಣ್ಣ ಉಳಿತಾಯ ಪಿಗ್ಗಿ ಬ್ಯಾಂಕ್ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಮಕ್ಕಳಲ್ಲಿ ಹಣಕಾಸಿನ ಅರಿವು ಮತ್ತು ಉತ್ತಮ ಜೀವನಶೈಲಿಯನ್ನು ಬೆಳೆಸಲು ಬಹಳ ಉಪಯುಕ್ತವಾಗಿದೆ ಪಿಗಿ ಬ್ಯಾಂಕ್‌ನಲ್ಲಿ ಪ್ರತಿದಿನ ಸ್ವಲ್ಪ ಹಣ ಹಾಕುವ ಮೂಲಕ ಮಕ್ಕಳು ಉಳಿತಾಯ ಮಾಡುವ ಅಭ್ಯಾಸವನ್ನು ಮಕ್ಕಳು ಕಲಿಯುತ್ತಾರೆ ಹಾಗೂ ಹಣವನ್ನು ಕೂಡಿಸಿ ನಂತರ ಬಳಸುವ ಅನುಭವದಿಂದ ಹಣದ ಮೌಲ್ಯ ಏನು ಎಂಬುದು ಅವರಿಗೆ ಅರ್ಥವಾಗುತ್ತದೆ ಈ ರೀತಿಯ ಮಕ್ಕಳ ಪಿಗಿ ಬ್ಯಾಂಕುಗಳನ್ನು ಪ್ರಾರಂಭಿಸುವುದರಿಂದ ಮಕ್ಕಳು ಉಳಿತಾಯದ ಹಣದಲ್ಲಿ ಒಳ್ಳೆಯ ಪುಸ್ತಕಗಳನ್ನು ಕೊಂಡುಕೊಳ್ಳಲು ಕುಟುಂಬದ ಕಷ್ಟಕಾಲದಲ್ಲಿ ಶಾಲೆಯ ಶುಲ್ಕವನ್ನು ಭರಿಸುವಲ್ಲಿ ಸಹಾಯಕವಾಗುವುದರ ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ನಾಗರಾಜ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲೆಗಳಲ್ಲಿ ಮಕ್ಕಳ ಪಿಗ್ಗಿ ಬ್ಯಾಂಕ್ ಯೋಜನೆ ಪ್ರಾರಂಭಿಸುವುದರಿಂದ ಮಕ್ಕಳಲ್ಲಿ ಉಳಿತಾಯದ ಮನೋಭಾವ, ಶಿಸ್ತಿನ ಜೀವನಶೈಲಿ ಹಾಗೂ ಹಣಕಾಸಿನ ಅರಿವು ಮೂಡಿಸುವ ಸಲುವಾಗಿ ಪ್ರಾರಂಭಿಸಿರುವ ಈ ಪಿಗಿ ಬ್ಯಾಂಕ್ ಪ್ರತಿ ಶುಕ್ರವಾರದ ದಿನದ ಕೊನೆಯ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಆದಿನ ಮಕ್ಕಳು ರೂ.5 ಠೇವಣಿ ಹೂಡುವುದರೊಂದಿಗೆ ಖಾತೆ ತೆರೆಯಬಹುದಾಗಿದೆ ಖಾತೆ ತೆರೆಯಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ ಖಾತೆ ತೆರೆದ ಮಕ್ಕಳಿ ಉಳಿತಾಯ ಪುಸ್ತಕ ನೀಡಲಾಗುವುದು ಉಳಿತಾಯದ ಹಣದಲ್ಲಿ ಒಮ್ಮೆ 10ರೂ ಮಾತ್ರ ಹಿಂಪಡೆಯಬಹುದಾಗಿದೆ ಈ ರೀತಿ ಮಾಡುವುದರಿಂದ ಮಕ್ಕಳು ಹಣದ ಮೌಲ್ಯದ ಅರಿವು ಮೂಡಿ ಹಣವನ್ನು ಸುಲಭವಾಗಿ ಖರ್ಚು ಮಾಡುವುದಕ್ಕೆ ಬದಲು ಯೋಚಿಸಿ ಬಳಸುವ ಗುಣ ಬೆಳೆಯುತ್ತದೆ ಎಂದು ಪಿಗ್ಗಿ ಬ್ಯಾಂಕಿನ ಉದ್ದೇಶ ತಿಳಿಸಿದರು. ಹಲವು ಮಕ್ಕಳು 5ರೂ ನೀಡಿ ಖಾತೆಗಳನ್ನು ತೆರೆದ ಮಕ್ಕಳಿಗೆ ಪಾಸ್ ಬುಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯರಬಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ಸಿಬ್ಬಂದಿ ರಂಗಚಾರ್ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ಸವಿತ ವಿಜಯಮ್ಮ, ಅನಸುಯಮ್ಮ, ಮಂಜುನಾಥ್, ಮಾರುತಿ, ಸಂತೋಷ ದರ್ಶನ್, ರಾಜು, ವೀರೇಂದ್ರ, ಭುವನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!