ಉದಯವಾಹಿನಿ, ಬೆಂಗಳೂರು: ಸಿಎಂ ಕುರ್ಚಿ ವಿಚಾರದಲ್ಲಿನ ಗೊಂದಲಗಳಿಗೆ ಹೈಕಮಾಂಡ್ ಉತ್ತರ ಕೊಡಬೇಕು ಅಂತ ಗೃಹ ಸಚಿವ ಪರಮೇಶ್ವರ್ ಪುನರುಚ್ಚಾರ ಮಾಡಿದ್ದಾರೆ. ಪರಮೇಶ್ವರ್ ಸಿಎಂ ಆಗಬೇಕು ಎಂಬ ಅಭಿಮಾನಿಗಳು ಕೂಗಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಕುರ್ಚಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿದೆ. ನಾನು ಅದಕ್ಕೆ ಹೆಚ್ಚು ಗೊಂದಲ ಮಾಡೋದಕ್ಕೆ ತಯಾರಿಲ್ಲ. ಅನೇಕರು ನನ್ನನ್ನ ಪ್ರಶ್ನೆ ಮಾಡ್ತಾರೆ, ಅಭಿಮಾನಿಗಳು ಅಲ್ಲಲ್ಲಿ ಸಿಎಂ ಅಗಬೇಕು ಅಂತ ಅವರ ಭಾವನೆ ವ್ಯಕ್ತಪಡಿಸುತ್ತಾರೆ. ಸಿಎಂ ಆಗಬೇಕು ಅಂತ ಘೋಷಣೆ ಕೂಗ್ತಾರೆ. ಇದಕ್ಕೆಲ್ಲಾ ಉತ್ತರ ಹೈಕಮಾಂಡ್ ಕೊಡಬೇಕು. ಹೈಕಮಾಂಡ್ ಯಾವ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೋ ಆ ಸಮಯದಲ್ಲಿ ತೀರ್ಮಾನ ಮಾಡ್ತಾರೆ. ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡೋದ್ರಲ್ಲಿ ಅರ್ಥ ಇಲ್ಲ. ಏಕೆಂದ್ರೆ ಅದರ ಬಗ್ಗೆ ಉತ್ತರ ಸಿಗೊಲ್ಲ. ಉತ್ತರ ಸಿಗಬೇಕಾಗಿರೋದು ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ಅದರಿಂದ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!