ಉದಯವಾಹಿನಿ, ವಾಷಿಂಗ್ಟನ್‌: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಜೊತೆಗಿನ ಸಂಬಂಧಕ್ಕಾಗಿ ಕ್ಷಮೆಯಾಚಿಸಿದ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ರಷ್ಯಾದ ಮಹಿಳೆಯರೊಂದಿಗೆ ತನಗೆ ಎರಡು ಸಂಬಂಧಗಳಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಗೇಟ್ಸ್‌ ಫೌಂಡೇಶನ್‌ ಸಿಬ್ಬಂದಿಗಳ ಜೊತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಅವರು ತಾನು ಎಪ್‌ಸ್ಟೀನ್ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಗೆಟ್ಸ್‌ ಫೌಂಡೇಶನ್ ವಕ್ತಾರರು ಮಾಧ್ಯಮಗಳ ಜೊತೆ ಹಂಚಿಕೊಂಡ ಹೇಳಿಕೆಯ ಪ್ರಕಾರ ಇತ್ತೀಚಿಗೆ ಟೌನ್‌ ಹಾಲ್‌ ಸಭೆಯಲ್ಲಿ ಬಿಲ್‌ ಗೇಟ್ಸ್‌( ತನ್ನ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡು ಎಪ್‌ಸ್ಟೀನ್‌ ಜೊತೆಗಿನ ಸಂಬಂಧಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಬಿಲ್‌ ಗೇಟ್ಸ್‌ ಹೇಳಿದ್ದೇನು?
ಎಪ್‌ಸ್ಟೀನ್‌ ಜೊತೆಗಿದ್ದ ಮಹಿಳೆಯರೊಂದಿಗೆ ನಾನು ಸಮಯ ಕಳೆಯಲಿಲ್ಲ. ನಾನು ರಷ್ಯಾದ ಮಹಿಳೆಯರೊಂದಿಗೆ ಎರಡು ಸಂಬಂಧಗಳನ್ನು ಹೊಂದಿದ್ದೇನೆ. ಆದರೆ ಆ ಮಹಿಳೆಯರು ಎಪ್‌ಸ್ಟೀನ್‌ನ ರೆಸಾರ್ಟ್‌ನಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಲ್ಲ.ನಾನು ಅಕ್ರಮವಾಗಿ ಏನನ್ನೂ ಮಾಡಿಲ್ಲ. ನಾನು ಅಕ್ರಮವಾಗಿ ಏನನ್ನೂ ನೋಡಲಿಲ್ಲ. ಎಪ್‌ಸ್ಟೀನ್‌ ಜೊತೆಗಿದ್ದ ಮಹಿಳೆಯರೊಂದಿಗೆ ಯಾವುದೇ ಸಮಯವನ್ನು ಕಳೆದಿಲ್ಲ. ಎಪ್‌ಸ್ಟೀನ್‌ ಜೊತೆಗಿನ ಸಭೆಗೆ ನಾನು ಗೇಟ್ಸ್‌ ಫೌಂಡೇಶನ್‌ನ ಅಧಿಕಾರಿಗಳನ್ನು ಕರೆತಂದಿದ್ದು ತಪ್ಪು. ನಾನು ಮಾಡಿದ ತಪ್ಪಿನಿಂದಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!