ಉದಯವಾಹಿನಿ, ಹೈದರಾಬಾದ್: ತೆಲಂಗಾಣದಲ್ಲಿ ಕಳೆದೊಂದು ವಾರದಿಂದ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು,ಪ್ರವಾಹ ಹಾಗು ಮಳೆ ಸಂಬಂಧಿ ಅನಾಹುತಗಳಿಂದ ಸಾವಿನ ಸಂಖ್ಯೆ ೨೩ ಕ್ಕೆ ಏರಿಕೆಯಾಗಿದೆ. ಮುಲುಗು ಜಿಲ್ಲೆಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ೧೪ ಶವಗಳನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದೆ,ಈ ವರ್ಷದ ಮುಂಗಾರು ಋತುವಿನಲ್ಲಿ ದೇಶದಲ್ಲಿ ಅತ್ಯಧಿಕ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಮುಲುಗು ಜಿಲ್ಲೆಯಲ್ಲಿ ೬೪೯.೮ಮಿಮೀ ಮಳೆಯಾಗಿದೆ ಎಂದು “ತೆಲಂಗಾಣ ಸರ್ಕಾರದ ದಾಖಲೆ ಅಂಕಿಅಂಶಗಳು ಈ ವಿಷಯ ಬಹಿರಂಗಪಡಿಸಿದೆ.
ಈ ಹಿಂದೆ, ಗುಜರಾತ್‌ನ ಗಿರ್‍ಸೋಮನಾಥ್ ೫೪ ಸೆಂ.ಮೀ. ಮತ್ತು ಮಾಥೆ ಮಹಾರಾಷ್ಟ್ರದಲ್ಲಿ ೪೦ ಸೆಂ.ಮೀ ಮಳೆಯಾಗುವ ಮೂಲಕ ಕಳೆದ ವಾರ ಎರಡೂ ಒಂದೇ ದಿನದ ಗರಿಷ್ಠ ಪ್ರಮಾಣದಲ್ಲಿ ಮಳೆಯಾಗಿತ್ತು. ಅದನ್ನು ಅಳಿಸಿ ಹಾಕಲಾಗಿದೆ.
ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ೧೪ ಮಂದಿ ಸಾವನ್ನಪ್ಪಿದೆ. ಕೊಂಡೈ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡ ಕೊಂಡೈ ಗ್ರಾಮದಲ್ಲಿ ವರದಿಯಾಗಿದೆ. ಪ್ರವಾಹಕ್ಕೆ ಸಿಲುಕಿದ ಜಂಪಣ್ಣ ವಾಗು ಹೊಳೆಯಲ್ಲಿ ಸಂತ್ರಸ್ತರು ಕೊಚ್ಚಿಕೊಂಡು ಹೋಗಿದ್ದು, ಮೃತದೇಹಗಳು ಪತ್ತೆಯಾಗಿವೆ. ಪ್ರವಾಹ ನೀರು ಇಳಿಮುಖವಾಗುತ್ತಿದ್ದಂತೆ ಮತ್ತು ಹೆಚ್ಚಿನ ಮೃತದೇಹಗಳು ಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಕೊಂಡೈನಲ್ಲಿ ಬದುಕುಳಿದವರು ಆಶ್ರಯ ಪಡೆಯಲು ಎತ್ತರದ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. ಅವರನ್ನು ರಕ್ಷಸಿಲು ಹೆಲಿಕಾಪ್ಟರ್ ಬಳಸಲಾಗಿದೆ. ಮಲ್ಯಾಳ ಮತ್ತು ದೊಡ್ಲಾ ಸೇರಿದಂತೆ ಮುಲುಗುವಿನ ಇತರ ಗ್ರಾಮಗಳಲ್ಲಿ ಪ್ರವಾಹದಿಂದ ಬಾರಿ ಹಾನಿಯಾಗಿವೆ. ನೀರು ಕಡಿಮೆಯಾಗದಿದ್ದಲ್ಲಿ ಸಂತ್ರಸ್ತ ಗ್ರಾಮಗಳ ಜನರು ತಮ್ಮ ತಮ್ಮ ಮನೆಗಳಿಗೆ ಪ್ರವೇಶಿಸಲಿದ್ದಾರೆ ಎಂದು ರಾಜ್ಯದ ಬುಡಕಟ್ಟು ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!