ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 1:22 ಸುಮಾರಿಗೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ, ಬಾಂಗ್ಲಾದೇಶದ ಢಾಕಾದ ಅಗರ್‌ಗಾಂವ್‌ನಲ್ಲಿರುವ 35 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿ ಕಂಪಿಸುತ್ತಿದ್ದಂತೆ ಕಟ್ಟಡಗಳಿಂದ ಜನರು ಭಯಗೊಂಡು ಹೊರಗಡೆ ಓಡಿಕೊಂಡು ಬಂದಿದ್ದಾರೆ. ಬಾಂಗ್ಲಾದಲ್ಲಿ ಭೂಕಂಪವಾದರೂ ಪಶ್ಚಿಮ ಬಂಗಾಳದ ಹಲವೆಡೆ ಕಂಪನ ಅನುಭವವಾಗಿದೆ.
ಕೋಲ್ಕತ್ತಾದಲ್ಲಿ ಕೇಂದ್ರ ಸಚಿವ ಸುಕಾಂತ ಮಜುಂದಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕಂಪನದ ಅನುಭವವಾಗಿದೆ. ಸಚಿವರು ಏನಾಯಿತು ಏನಾಯಿತು ಎಂದು ಸಭಿಕರನ್ನು ಪ್ರಶ್ನಿಸಿ ನಂತರ ಭಾಷಣ ಮುಂದುವರಿಸಿದರು.
