ಉದಯವಾಹಿನಿ, ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 1 ರಂದು ಕರಗ ಉತ್ಸವ ನಡೆಸಲು ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ. ಈ ಬಾರಿಯ ಬೆಂಗಳೂರು ಕರಗ ಏಪ್ರಿಲ್ -1 ರಂದು ನಡೆಯಲಿದೆ. 11 ದಿನಗಳ ಕಾಲ ನಡೆಯುವ ಕರಗ ಅದ್ಧೂರಿ ಉತ್ಸವಕ್ಕೆ ಮಾರ್ಚ್ 24 ರಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗುತ್ತದೆ. ಮಾರ್ಚ್ 30 ರಂದು ಹಸಿ ಕರಗ ನಡೆಯಲಿದೆ. ಅದ್ರಲ್ಲೂ ಈ ಬಾರಿ ಮೈಸೂರು ದಸರಾ ಮಾದರಿಯಲ್ಲೇ ಕರಗ ಮಹೋತ್ಸವಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದೇವೆ ಅಂತಾ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇನ್ನು ಕರಗ ಕಮೀಷನ್ ವಿಚಾರ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇಲಾಖೆ ಈ ಬಾರಿ ಅನುದಾನದ ಬಳಕೆ ರಿಲೀಸ್ ಟೆಂಡರ್ ಜವಾಬ್ದಾರಿಯನ್ನ ಜಿಬಿಎ ಹೆಗಲಿಗೆ ವಹಿಸಲಿದೆ. ದೇಗುಲದ ಒಳಗಿನ ಸಿದ್ಧತೆ ಮಾತ್ರ ಮುಜರಾಯಿ ನೋಡಿಕೊಳ್ಳಲಿದೆ ಅಂತಾ ಸಚಿವರು ಹೇಳಿದ್ರು. ಇನ್ನು ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಾತಿಯೂ ನಡೆದಿದ್ದು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಿಂತನೆ ನಡೆದಿದೆಯಂತೆ. ಈ ಬಾರಿ ವಿಶೇಷ ಕರಗ ನಡೆಸುತ್ತೇವೆ ಅಂತಾ ವ್ಯವಸ್ಥಾಪನಾ ಸಮಿತಿ ಹೇಳಿದೆ.
