ಉದಯವಾಹಿನಿ, ಕೋಲ್ಕತ್ತಾ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೋಲ್ಕತ್ತಾ ಪೊಲೀಸ್‌ನ ಮೂಲಕ ಎರಡು ಹೊಸ ಉಪಕ್ರಮಗಳನ್ನು ಘೋಷಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಕೂಡಿದ ‘ಪಿಂಕ್ ಬೂತ್’ ಮತ್ತು ‘ಶೈನಿಂಗ್’ ಎಂಬ ಹೆಸರಿನ ಮಹಿಳಾ ಮೊಬೈಲ್ ಗಸ್ತು ತಂಡಗಳನ್ನು ಸ್ಥಾಪಿಸಿದ್ದಾರೆ. ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಸ್ಟ್ನಲ್ಲಿ ಈ ವಿವರಗಳನ್ನು ಹಂಚಿಕೊಂಡಿದ್ದಾರೆ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ‘ಪಿಂಕ್ ಬೂತ್‌ಗಳನ್ನು’ ಸ್ಥಾಪಿಸಲಾಗುತ್ತದೆ. ಇವು ಸಂಜೆಯಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿವೆ. ಈ ಬೂತ್‌ಗಳಲ್ಲಿ ನಿಯೋಜಿತ ಮಹಿಳಾ ಪೊಲೀಸ್ ಸಿಬ್ಬಂದಿ ಮಹಿಳೆಯರಿಗೆ ನೇರವಾಗಿ ಸಹಾಯ ಮಾಡುತ್ತಾರೆ ಮತ್ತು ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮಹಿಳಾ ಅಧಿಕಾರಿಗಳೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ವಿಶ್ವಾಸ ಬೆಳೆಸಿಕೊಳ್ಳಬಹುದು ಎಂದು ಮಮತಾ ಹೇಳಿದ್ದಾರೆ.

ಇದಲ್ಲದೆ, ‘ಶೈನಿಂಗ್’ ಎಂಬ ಹೆಸರಿನ ಮಹಿಳಾ ಮೊಬೈಲ್ ಗಸ್ತು ತಂಡಗಳನ್ನು ರಾತ್ರಿ 8 ಗಂಟೆಯಿAದ ಬೆಳಿಗ್ಗೆ 2 ಗಂಟೆಯವರೆಗೆ ನಿಯೋಜಿಸಲಾಗುತ್ತದೆ. ಈ ತಂಡಗಳು ಎಫ್‌ಜೆಎ ಬೈಪಾಸ್ ಮತ್ತು ನಗರದ ಇತರ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಲಿವೆ. ರಾತ್ರಿ ಸಮಯದಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಾಗಿ ಬಳಸುವ ರಸ್ತೆಗಳಲ್ಲಿ ಗಸ್ತು ನಡೆಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!