ಉದಯವಾಹಿನಿ, ಹೈದರಾಬಾದ್(ತೆಲಂಗಾಣ): ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ, ಜಗತ್ತಿನ ಅತಿದೊಡ್ಡ ಚಲನಚಿತ್ರ ನಗರವಾದ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾರ್ಚ್ ತಿಂಗಳ ಅಂತ್ಯದವರೆಗೆ ‘ಮಹಿಳಾ ಮಾಸಿಕ ಉತ್ಸವ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದರ ಭಾಗವಾಗಿ, ವಿಶೇಷ ಕಾರ್ಯಕ್ರಮಗಳೊಂದಿಗೆ ಮನರಂಜನೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ವಯೋಮಾನದ ಮಹಿಳಾ ಅತಿಥಿಗಳ ಮನರಂಜಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ, ಮಂತ್ರಮುಗ್ಧಗೊಳಿಸಲು ಚಿತ್ರನಗರಿ ಸಜ್ಜುಗೊಂಡಿದೆ.
ಈ ಮಹಿಳಾ ಮಾಸಿಕ ಉತ್ಸವಗಳಲ್ಲಿ ಭಾಗವಹಿಸಲು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮರೆಯಲಾಗದ ನೆನಪುಗಳನ್ನು ಅನುಭವಿಸಲು ಮಹಿಳೆಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ವನಿತೆಯರು ತಮ್ಮ ಪ್ರತಿಭೆಯೊಂದಿಗೆ ಉನ್ನತ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆಗೆ ಮಾರ್ಚ್ ತಿಂಗಳನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಇಂದಿನಿಂದ ಮಾರ್ಚ್ 31ರವರೆಗೆ, ಮಹಿಳೆಯರಿಗೆ ವಿಶೇಷ ಆಫರ್ನೊಂದಿಗೆ ಫಿಲ್ಮ್ ಸಿಟಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ.
ಈ ಮಹಿಳಾ ಮಾಸಿಕ ಉತ್ಸವ ವಿಶೇಷ ಕಾರ್ಯಕ್ರಮಗಳು ಮತ್ತು ಸಿಹಿ ಫಿಲ್ಮ್ ಸಿಟಿ ಸ್ಟುಡಿಯೋ ಪ್ರವಾಸ ಮಾಡಲು ಅವಕಾಶವಿರಲಿದೆ. ಇದರ ಜೊತೆಗೆ, ಮಹಿಳೆಯರಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಆಯೋಜಿಸಿರುವ ಮಹಿಳಾ ಮಾಸಿಕ ಉತ್ಸವವನ್ನು ಪ್ರತಿಯೊಬ್ಬ ಮಹಿಳೆಯೂ ಸಂತಸದಲ್ಲಿ ಮಿಂದೇಳುವಂತೆ ವಿನ್ಯಾಸಗೊಳಿಸಲಾಗಿದೆ.
ವಿಶೇಷ ಆಕರ್ಷಣೆಗಳು: ಎಲ್ಲಾ ವಯಸ್ಸಿನ ಮಹಿಳೆಯರು ಫಿಲ್ಮ್ ಸಿಟಿಯಲ್ಲಿ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಚಲನಚಿತ್ರ ಜಗತ್ತಿನ ವಿವಿಧ ಮನರಂಜನೆ, ವಿಹಾರಗಳು ಮತ್ತು ಸಿನಿಮೀಯ ವೈಭವವನ್ನು ಆನಂದಿಸಬಹುದು. ಇದರಲ್ಲಿ, ಸ್ಟುಡಿಯೋ ಪ್ರವಾಸದಲ್ಲಿ ಅನೇಕ ಚಲನಚಿತ್ರ ಸೆಟ್‌ಗಳನ್ನು ಕಾಣಬಹುದು. ಸವಾರಿಗಳು, ಸಾಹಸ, ಲೈವ್ ಪ್ರದರ್ಶನಗಳು, ಚಿಟ್ಟೆ ಉದ್ಯಾನ, ವರ್ಚುವಲ್ ಶೂಟ್, ಮನರಂಜನಾ ಪಕ್ಷಿ ಉದ್ಯಾನವನ, ಮೋಷನ್ ಕ್ಯಾಪ್ಚರ್, ಮಾಯಾ ಲೋಕ ಸೇರಿ ಇತರ ಹಲವು ಆಕರ್ಷಣೆಗಳನ್ನು ಕಾಣಬಹುದು. ಆಫರ್ ಲಾಭ ಪಡೆದುಕೊಳ್ಳಿ: ರಾಮೋಜಿ ಫಿಲ್ಮ್ ಸಿಟಿ ಮಹಿಳಾ ದಿನದ ಕೊಡುಗೆಯ ಭಾಗವಾಗಿ, ಎಲ್ಲಾ ವಯಸ್ಸಿನ ಮಹಿಳೆಯರು ಪ್ರತಿ ಸದಸ್ಯರಿಗೆ ಪ್ರವೇಶ ಟಿಕೆಟ್ ದರವು ರೂ.1,111+GST ಇದೆ. ಅಲ್ಲದೆ, ನೀವು ಕನಿಷ್ಠ 11 ಜನರು ಸೇರಿಕೊಂಡು ಒಟ್ಟಿಗೆ ಗ್ರೂಪ್ಗಳಲ್ಲಿ ಬಂದರೆ, ಟಿಕೆಟ್ ದರ ಪ್ರತಿಯೊಬ್ಬರಿಗೆ ರೂ.999+GST ಆಗಿರಲಿದೆ. ಗುಂಪಾಗಿ ಬಂದು ಇಲ್ಲಿನ ಆಚರಣೆಗಳನ್ನು ಹೆಚ್ಚು ಉತ್ಸಾಹದಿಂದ ಆನಂದಿಸಲು ಇದು ಉತ್ತಮ ಅವಕಾಶವಾಗಿದೆ. ಈ ಸದಾವಕಾಶ ಬಳಸಿಕೊಂಡು ಮಹಿಳಾ ಮಾಸದ ಆಚರಣೆಗಳಲ್ಲಿ ಭಾಗವಹಿಸುವ ಮೂಲಕ ಮರೆಯಲಾಗದ ಅನುಭವವನ್ನು ಪಡೆಯಬಹುದಾಗಿದೆ.
