ಉದಯವಾಹಿನಿ, ಮಡಿಕೇರಿ: ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಹಿನ್ನೆಲೆ ರಾಜ್ಯದ ಹಲವು ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆ ಆಗಲಿದೆ. ಈ ಗ್ರಹಣದ ನಂತರ ಹಲವು ರಾಶಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಆಗಲಿವೆ ಎಂದು ದೇವಾಲಯದ ಅರ್ಚಕರು ಹೇಳುತ್ತಿದ್ದಾರೆ. ಅದರಂತೆ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲೂ ಪೂಜಾ ಸಮಯದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮಾರ್ಚ್ 3 ರಂದು ಬೆಳಗ್ಗೆ 9 ಗಂಟೆಯೊಳಗೆ ಗ್ರಹಣ ಕಾಲದ ಶುದ್ಧೀಕರಣ ಮತ್ತು ಸಂಪ್ರೋಕ್ಷಣೆ ನೆರವೇರಿಸಿ ಬಳಿಕ ಗರ್ಭಗುಡಿ ಬಾಗಿಲನ್ನ ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ ಅಂದ್ರೆ ಸಂಜೆ 7 ಗಂಟೆ ಬಳಿಕ ದೇವಾಲಯದಲ್ಲಿ ಆಲಯಾರ್ಚನೆ, ಅಭಿಷೇಕ ಮತ್ತು ಸಂಪ್ರೋಕ್ಷಣೆ ಶಾಂತಿ ಕಾರ್ಯಗಳು ಜರುಗುತ್ತವೆ ಎಂದು ದೇವಾಲಯ ವ್ಯವಸ್ಥಾಪಮಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ.
