ಉದಯವಾಹಿನಿ, ಶಾಂಘೈ : ವಿಶ್ವವಿದ್ಯಾಲಯಕ್ಕೆ ಬೈಕ್ ಅಥವಾ ಕಾರಿನಲ್ಲಿ ವಿದ್ಯಾರ್ಥಿಗಳು ಬರುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ಸುಮಾರು 27 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿನಲ್ಲಿ ವಿದ್ಯಾರ್ಥಿಯೊಬ್ಬ ಕ್ಯಾಂಪಸ್‌ಗೆ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಚೀನಾದ ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ವಿಶ್ವದ ಅತ್ಯಂತ ದುಬಾರಿ ಮತ್ತು ಸೀಮಿತ ಆವೃತ್ತಿಯ ಕಾರುಗಳಲ್ಲಿ ಒಂದಾದ ಚಾಲನೆ ಮಾಡಿ ಕಾಲೇಜಿಗೆ ಬಂದಿದ್ದಾನೆ ಎನ್ನಲಾಗಿದೆ. ಸದ್ಯ, ಆತ ದುಬಾರಿ ಕಾರಿನಲ್ಲಿ ಬಂದ ವಿಡಿಯೋ ‘ಎಕ್ಸ್​’ನಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಈ ಕಾರಿನ ಅಂದಾಜು ಮೌಲ್ಯ ಸುಮಾರು 3 ಮಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿದ್ದು, ಭಾರತೀಯ ಮೌಲ್ಯದಲ್ಲಿ ಅಂದಾಜು 27 ಕೋಟಿ ರೂ. ಆಗಿದೆ.

ಪಾರ್ಕಿಂಗ್ ಸ್ಥಳದಲ್ಲಿ ಹೊಳೆಯುವ ಐಷಾರಾಮಿ ಕಾರು ನಿಲ್ಲಿಸಿರುವುದು ಎಕ್ಸ್ ವಿಡಿಯೋದಲ್ಲಿ ಕಾಣುತ್ತದೆ. ಕಾರನ್ನು ನೋಡಲು ವಿದ್ಯಾರ್ಥಿಗಳ ಗುಂಪು ಕೂಡಿಕೊಂಡಿದ್ದು, ಕೆಲವರು ಫೋಟೋ ಮತ್ತು ವಿಡಿಯೋ ತೆಗೆಯುವುದರಲ್ಲಿ ಮುಳುಗಿದ್ದಾರೆ. ಬಳಿಕ ಯುವಕನೊಬ್ಬ ಬಂದು ಕಾರಿನ ಬಾಗಿಲು ತೆರೆಯುವ ಮೂಲಕ ಆರಾಮವಾಗಿ ಒಳಗೆ ಕುಳಿತುಕೊಳ್ಳುವುದು ವಿಡಿಯೋದಲ್ಲಿದೆ.

 

Leave a Reply

Your email address will not be published. Required fields are marked *

error: Content is protected !!