ಉದಯವಾಹಿನಿ, ಧಾರವಾಡ: ಅಮೆರಿಕ – ಇರಾನ್ ನಡುವಿನ ಸಂಘರ್ಷದಿಂದಾಗಿ ಉಮ್ರಾ ಯಾತ್ರೆಗೆ ತೆರಳಿದ್ದ ಉತ್ತರ ಕರ್ನಾಟಕದ 23 ಯಾತ್ರಿಕರು ಸೌದಿ ಅರೇಬಿಯಾದಲ್ಲೇ ಲಾಕ್‌ ಆಗಿದ್ದಾರೆ. ಕಳೆದ ಫೆ.8 ರಂದು ಭಾರತದಿಂದ ಉಮ್ರಾ ಮಾಡಲು ಸೌದಿ ಅರೇಬಿಯಾಗೆ ಹೋಗಿದ್ದ 23 ಸದಸ್ಯರು ಫೆ.28 ರಂದು ಭಾರತಕ್ಕೆ ವಾಪಸ್‌ ಆಗಬೇಕಿತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡು ಮದಿನಾದಿಂದ 150 ಕಿಮೀ ದೂರದಲ್ಲಿರುವ ಏರ್‌ಪೋರ್ಟ್‌ ಕಡೆಗೆ ಹೊರಟಿದ್ದರು. ಆದ್ರೆ ಯುದ್ಧ ಆರಂಭವಾದ ಹಿನ್ನೆಲೆ ಇವರು ಮದಿನಾಗೆ‌ ಮತ್ತೇ ವಾಪಾಸ್ ಆಗಿದ್ದಾರೆ.

ಸದ್ಯ 7 ದಿನದಿಂದ ಮದಿನಾದಲ್ಲೇ ಇರುವ ಈ 23 ಜನರಲ್ಲಿ, ಧಾರವಾಡದ ನೌಶಾದ್ ಕೊಟಬಾಗಿ, ಜೈಬುನ್ನಿಸಾ, ಫರೀದಾ ಬೇಗಂ ಕೂಡಾ ಇದಾರೆ. ಇನ್ನು ಈ‌ ಗುಂಪಿನಲ್ಲಿ ಬೆಳಗಾವಿಯ 2, ಹುಬ್ಬಳ್ಳಿ 5, ಬೈಲಹೊಂಗಲದ 2, ಬಳ್ಳಾರಿ 2, ಧಾರವಾಡದ 10 ಮಂದಿ ಸೇರಿ 23 ಜನ ಸಿಲುಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!