ಉದಯವಾಹಿನಿ, ಬೀಜಿಂಗ್, ಚೀನಾ: ಅಧ್ಯಕ್ಷ ಡೊನಾಲ್ಡ್​ ಟ್ರಂಫ್​ ರ ಸುಂಕ ಯುದ್ಧ, ಅಮೆರಿಕ – ಇರಾನ್ ಯುದ್ಧದ ನಂತರ ಹದಗೆಡುತ್ತಿರುವ ಜಾಗತಿಕ ರಾಜಕೀಯ ವಿದ್ಯಮಾನಗಳು, ಆಸ್ತಿ ಮಾರುಕಟ್ಟೆ ಕುಸಿತ ಮತ್ತು ನಿರುದ್ಯೋಗ ಬಿಕ್ಕಟ್ಟಿನ ಕಾರಣದಿಂದಾಗಿ ದೇಶೀಯ ಆರ್ಥಿಕತೆಯಲ್ಲಿನ ಹಿನ್ನಡೆಗಳನ್ನು ಎದುರಿಸಲು ಚೀನಾ ಗುರುವಾರ ತನ್ನ ಜಿಡಿಪಿ ಗುರಿಯನ್ನು ಈ ವರ್ಷದ ಶೇ. 4.5 ರಿಂದ 5 ಕ್ಕೆ ಇಳಿಸಿದೆ.
ಪ್ರಾರಂಭವಾದ ದೇಶದ ಸಂಸತ್ತಿನ ವಾರ್ಷಿಕ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ – ಎನ್‌ಪಿಸಿ ಎದುರು ಮಂಡಿಸಿದ ತಮ್ಮ ಕೆಲಸದ ವರದಿಯಲ್ಲಿ ಚೀನಾದ ಪ್ರಧಾನಿ ಲಿ ಕ್ವಿಯಾಂಗ್ ಅವರು ದೇಶದ ಆರ್ಥಿಕ ಬೆಳವಣಿಗೆಯ ಗುರಿಯನ್ನು ಘೋಷಿಸಿದ್ದಾರೆ. ಬೆಳೆಯುತ್ತಿರುವ ದೇಶೀಯ ಆರ್ಥಿಕ ಸವಾಲುಗಳ ನಡುವೆ ಚೀನಾ ಕಳೆದ ಮೂರು ವರ್ಷಗಳಿಂದ ಜಿಡಿಪಿಗೆ ಐದು ಪ್ರತಿಶತ ಗುರಿಯನ್ನು ನಿಗದಿಪಡಿಸಿಕೊಂಡು ಬರುತ್ತಿದೆ. ಈ ವರ್ಷ, ಮೊದಲ ಬಾರಿಗೆ ಗುರಿಯನ್ನು 4.5 ರಿಂದ 5 ಪ್ರತಿಶತಕ್ಕೆ ಇಳಿಸಲಾಗಿದೆ.
ಚೀನಾದ ಆರ್ಥಿಕತೆಯು ಕಳೆದ ವರ್ಷ ಶೇ.5ರಷ್ಟು ಬೆಳವಣಿಗೆ ಕಂಡು 20.01 ಟ್ರಿಲಿಯನ್‌ ಡಾಲರ್​ ಗೆ ತಲುಪಿದೆ, ಇದು ಅಮೆರಿಕದ ಸುಂಕಗಳ ಹೊರತಾಗಿಯೂ ಬಲವಾದ ರಫ್ತುಗಳನ್ನು ಚೀನಾ ಕಾಯ್ದುಕೊಂಡಿದೆ. ಗುರುವಾರದ ಉದ್ಘಾಟನಾ ಅಧಿವೇಶನದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿ 2,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ವಾರ್ಷಿಕ ವರದಿ ಮಂಡಿಸಿದ ಲಿ, ಸರ್ಕಾರವು ಈ ವರ್ಷ ಶೇ. 4.5 ರಿಂದ ಶೇ. 5 ರವರೆಗಿನ ಆರ್ಥಿಕ ಬೆಳವಣಿಗೆಯ ಗುರಿ ಹಾಕಿಕೊಂಡಿದೆ. ಪ್ರಾಯೋಗಿಕವಾಗಿ ಇದನ್ನು ಸಾಧಿಸಲು ನಮ್ಮ ಸರ್ಕಾರ ಶ್ರಮಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ವರ್ಷದ ಅಭಿವೃದ್ಧಿಯ ಪ್ರಮುಖ ಗುರಿಗಳಲ್ಲಿ ಇವುಗಳು ಸೇರಿವೆ. ನಗರ ನಿರುದ್ಯೋಗ ದರ ಸುಮಾರು ಶೇ. 5.5 ಅಥವಾ 12 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ. ಹೊಸ ನಗರ ಉದ್ಯೋಗಗಳ ಸೃಷ್ಟಿ ಮತ್ತು ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಸುಮಾರು ಶೇ. 2 ರ ಹೆಚ್ಚಳ ಆಗಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ದೇಶೀಯ ಬೇಡಿಕೆಯು ವರ್ಷಗಳ ಕಾಲ ಸ್ಥಿರವಾಗಿಯೇ ಉಳಿದಿದೆ. ಆದರೆ ಚೀನಾ ತನ್ನ ಜಿಡಿಪಿ ಬೆಳವಣಿಗೆಗೆ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಲಿ ಹೇಳಿದರು. ಚೀನಾ ಬಳಕೆಯನ್ನು ಸಕ್ರಿಯವಾಗಿ ಹೆಚ್ಚಿಸುತ್ತದೆ ಮತ್ತು ನಗರ ಮತ್ತು ಗ್ರಾಮೀಣ ನಿವಾಸಿಗಳಿಗೆ ಆದಾಯ ಬೆಳವಣಿಗೆಯ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಲಿ ಇದೇ ವೇಳೆ ಘೋಷಿಸಿದ್ದಾರೆ.2026ರಲ್ಲಿ ಕಡಿಮೆ ಆದಾಯದ ಗುಂಪುಗಳ ಗಳಿಕೆಯನ್ನು ಹೆಚ್ಚಿಸಲು, ಆಸ್ತಿ ಆದಾಯವನ್ನು ಹೆಚ್ಚಿಸಲು ಮತ್ತು ಸಂಭಾವನೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಗಳನ್ನು ಪರಿಷ್ಕರಿಸಲು ಹಲವಾರು ಪ್ರಾಯೋಗಿಕ ಕ್ರಮಗಳನ್ನು ಜಾರಿಗೆ ತರುವುದರೊಂದಿಗೆ ಬಳಕೆಯನ್ನು ಹೆಚ್ಚಿಸಲು ದೇಶವು ವಿಶೇಷ ಉಪಕ್ರಮಗಳನ್ನು ಮುನ್ನಡೆಸಲಿದೆ ಎಂದು ಅವರು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!