
ಉದಯವಾಹಿನಿ, ಕೊಲ್ಹಾರ: ಸಚಿವ ಶಿವಾನಂದ ಪಾಟೀಲ್ ಶನಿವಾರ ಕೊಲ್ಹಾರ ಪಟ್ಟಣದ ಮೊಹರಂ ಅಲಾಯಿ ದೇವರುಗಳ ದರ್ಶನ ಪಡೆದರು.
ಹಿಂದೂ, ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಮೊಹರಂ ದೇವರುಗಳ ದರ್ಶನ ಪಡೆದು ತದನಂತರ ಅಧಿಕ ಮಾಸದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಮೌನಾಚರಣೆ ಹಮ್ಮಿಕೊಂಡಿರುವ ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ದೇವರಿಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ಕೋಟಿ ಜಪಾರಾಧನೆ ಹಮ್ಮಿಕೊಂಡಿರುವ ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳಿಗೆ ಸನ್ಮಾನಿಸಿ ಆಶಿರ್ವಾದ ಪಡೆದುಕೊಂಡರು. ನಂತರ ಪಟ್ಟಣದ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿದರು ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಉಸ್ಮಾನ ಪಟೇಲ್, ಎಸ್.ಬಿ ಪತಂಗಿ, ಪಂ ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ತೌಸೀಪ್ ಗಿರಗಾಂವಿ, ಮಹಾಂತೇಶ ಗಿಡ್ಡಪ್ಪಗೋಳ, ದಸ್ತಗೀರ ಕಲಾದಗಿ, ಇಕ್ಬಾಲ್ ನದಾಫ, ಬನಪ್ಪ ಬಾಲಗೊಂಡ, ಮಹೇಶ ಗಿಡ್ಡಪ್ಪಗೋಳ, ಹನೀಪ ಮಕಾನದಾರ, ದಶರಥ ಈಟಿ, ಅಶೋಕ್ ಜಿಡ್ಡಿಬಾಗಿಲ ಕಾಂಗ್ರೆಸ್ ಕಾರ್ಯಕರ್ತರು, ಮತ್ತಿತ್ತರು ಭಾಗಿಯಾದ್ದರು
