ಉದಯವಾಹಿನಿ,  ಕೊಲ್ಹಾರ: ಕೃಷ್ಣಾ ನದಿಗೆ  ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಅ.1.ರಂದು ಮಂಗಳವಾರ ರಂದು ಬೆಳಗ್ಗೆ 11.00 ಗಂ ಹಳೆಯ ಕೊಲ್ಹಾರದ ಹತ್ತಿರ ಇರುವ ಕೃಷ್ಣ ನದಿ ದಡದಲ್ಲಿ ಮಾಡಲಾಗುವುದು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದವರು, ಕಳೆದ 15 ವರ್ಷಗಳಿಂದ ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಮಹಾಬಳೇಶ್ವರದಲ್ಲಿ  ಕಡ್ಲಿಗರ ಹುಣ್ಣಿಮೆ ದಿನದಂದು ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ.ಇದೇ ಜು. 3ರಂದು ಮಹಾಬಲೇಶ್ವರಕ್ಕೆ ಹೊರಡುವ ಮುನ್ನ ಕೃಷ್ಣಾ ನದಿ ಸಂಪೂರ್ಣ ಬರಿದಾಗಿತ್ತು. ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ನೂರಾರು ರೈತರೊಂದಿಗೆ ಮಳೆ, ಬೆಳೆ ಸಮೃದ್ಧವಾಗಿ ಆಗಲಿ  ಪ್ರಸಕ್ತ ವರ್ಷವೂ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು  ಕಷ್ಟ  ಅನುಭವಿಸುತ್ತಿದ್ದು. ಬೆಳೆಗಳು ಬಾಡುತ್ತಿರುವುದರಿಂದ ವರುಣದೇವ ಸಂಪೂರ್ಣವಾಗಿ ಮಳೆ  ಕೊಟ್ಟು ಕೃಷ್ಣಾ ನದಿಯು ತುಂಬಿ ರೈತರ ಬಾಳಲ್ಲಿ ಬೆಳಕು ಚೆಲ್ಲಲಿ ಎಂದು ಪ್ರಾರ್ಥಿಸಿ ಸಂಕಲ್ಪ ಮಾಡಿ ಬಂದಿದ್ದೆವು. ಅದರಂತೆ ಕಳೆದು 15 ರಿಂದ 20 ದಿನಗಳಲ್ಲಿ ಕೃಷ್ಣೆಯ ಉಗಮ ಸ್ಥಾನ ಸಹ್ಯಾದ್ರಿ ಪರ್ವತದ ಭಾಗದಲ್ಲಿ ಮಳೆಯಾಗಿ ಕೃಷ್ಣಾನದಿ ಸಂಪೂರ್ಣ ತುಂಬುತ್ತಿದ್ದು‌. ಈಗಾಗಲೇ ಆಲಮಟ್ಟಿ ಅಣೆಕಟ್ಟೆಯಲ್ಲಿ 517 ಮೀ.ಅಷ್ಟು ನೀರು ಸಂಗ್ರಹವಾಗಿದ್ದು ಬರುವ ಅಧಿಕ ಮಾಸದ ಹುಣ್ಣಿಮೆ ದಿನ ಅ.01 ಮಂಗಳವಾರ ಬೆಳಗ್ಗೆ 11:00 ಗೆ ಬಸವನ ಬಾಗೇವಾಡಿ ಮತಕ್ಷೇತ್ರ ಸೇರಿದಂತೆ ಅವಳಿ ಜಿಲ್ಲೆಯ ಎಲ್ಲಾ ರೈತರು ಸಾರ್ವಜನಿಕರೊಂದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು  ಕಡ್ಲಿಗರ ಹುಣ್ಣಿಮೆಯಂದು ಕೃಷ್ಣ ನದಿಗೆ ಬಾಗಿನ ಅರ್ಪಣೆ ಮಾಡುವುದು ಪೂಜೆ ಸಲ್ಲಿಸುವುದು ಉಡಿ ತುಂಬುವುದು ಮೊದಲಿ ನಿಂದಲೂ ನಡೆದುಕೊಂಡು ಬಂದ ಪದ್ಧತಿ ಇದಕ್ಕೆ ಯಾರನ್ನು ಬಲವಂತದಿಂದ ಕರೆದುಕೊಂಡು ಬರುವಂತದ್ದಲ್ಲ ಎಲ್ಲರೂ
 ಸ್ವ ಇಚ್ಛೆ ಇಂದ ಬಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
    ಈ ಸಂದರ್ಭದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮದ ಉಸ್ತುವಾರಿ ಸಿ ಎಂ ಗಣಕುಮಾರ, ಮುಖಂಡರಾದ ಪರಮಾನಂದ ತನಿಕೇದಾರ್, ಬಿಜೆಪಿ ಮಂಡಲ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ರಾಜಶೇಖರ್ ಶೀಲವಂತ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಪ್ಪಾಸಿ ಮಟ್ಟಿಹಾಳ,ಬಾಬು ಭಜಂತ್ರಿ, ಬಸವರಾಜ್ ಬಾಗೇವಾಡಿ, ಇಸ್ಮಾಯಿಲ್ ತಾಸಿಲ್ದಾರ್  ಸಂಗಮೇಶ ವಾಡೆದ, ಬಸವರಾಜ್ ಬೂಮರೆಡ್ಡಿ, ಸದಾಶಿವ ಜಗತಾಪುಗೋಳ ಸೇರಿದಂತೆ ಮತ್ತಿತ್ತರು  ಇದ್ದರು.

Leave a Reply

Your email address will not be published. Required fields are marked *

error: Content is protected !!