
ಉದಯವಾಹಿನಿ, ಪೀಣ್ಯ ದಾಸರಹಳ್ಳಿ : ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿಯಾಗಿರಲಿಲ್ಲ ಅವರೊಬ್ಬ ಮಹಾನ್ ದರ್ಶನಿಕ ಶ್ರೇಷ್ಠ ಮಾನವತಾವಾದಿ. ಅತ್ಯುತ್ತಮ ಬರಹಗಾರ. ಸಾಮಾಜಿಕ ಕ್ರಾಂತಿ ಹರಿಕಾರ ಡಾ.ಅಂಬೇಡ್ಕರ್, ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಈ ಇಬ್ಬರ ಮಹಾನಿಯರ ಜನ್ಮ ದಿನಾಚರಣೆಯನ್ನು ಸರಳವಾಗಿ ವಿನೂತನವಾಗಿ ಅರ್ಥಪೂರ್ಣವಾಗಿ ಮಾರುತಿ ನಗರದ ಭೀಮ ಸಂದೇಶ ಕನ್ನಡ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹ ಮೂರ್ತಿ ನೇತೃತ್ವದಲ್ಲಿ ಭಾರತ ವೈಭವ, ಉದಯ ವಾಹಿನಿ ದಿನ ಪತ್ರಿಕೆ ಸುದ್ದಿ ಸೌಧ ಮತ್ತು ತೇಜಸ್ವಿ ಪತ್ರಿಕೆಯ ಸಂಪಾದಕ ಜಿ.ನಂದೀಶ್ ಸೇರಿದಂತೆ ವಿವಿಧ ಪತ್ರಿಕೆಗಳ ಪ್ರತಿನಿಧಿಗಳ ಸಂಯೋಗದಿಂದ ಹಮ್ಮಿಕೊಳ್ಳಲಾಗಿತ್ತು. ಈ ಮಹಾನ್ ನಾಯಕರ ಹುಟ್ಟುಹಬ್ಬದಂದು ಬೆಳ್ಳಿರಥದಲ್ಲಿ ಬುದ್ಧ ಬಸವ ಅಂಬೇಡ್ಕರ್ ರವರ ಭಾವಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾನಪದ ಕಲಾತಂಡಗಳಾದ ವೀರಗಾಸೆ. ಡೊಳ್ಳು ಕುಣಿತ. ಪೂಜಾ ಕುಣಿತ. ಪಟಕುನಿತ. ಹೀಗೆ ಅನೇಕ ಜಾನಪದ ಕಲಾ ತಂಡದೊಂದಿಗೆ ರಾಜಗೋಪಾಲನಗರ,ಪೀಣ್ಯ 2ನೇ ಹಂತ, ಮಾರುತಿ ನಗರ, ಫ್ರೆಂಡ್ಸ್ ಕಾಲೊನಿ ರಸ್ತೆ, ಅಂದ್ರಹಳ್ಳಿ ಮುಖ್ಯ ರಸ್ತೆ,ಹೆಗ್ಗನಹಳ್ಳಿ ಮುಖ್ಯ ರಸ್ತೆ ಮೂಲಕ ರಾಜಭೀದಿಗಳಲ್ಲಿ ವಿಜ್ರಂಭಣೆಯಿಂದ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ಪದ್ಮಾವತಿ ಅವರ ಪತಿ ಜೆಡಿಎಸ್ ಪ್ರಭಾವಿ ಯುವ ಮುಖಂಡ ನರಸಿಂಹಮೂರ್ತಿ (ಸಿಂಹ), ಭಾಗವಹಿಸಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.
ಹೆಗ್ಗನಹಳ್ಳಿ ಕ್ರಾಸ್ ಬಳಿ ಮೆರವಣಿಗೆಯಲ್ಲಿ ಭಾಗವಹಿಸಿದ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಪ್ರಭಾವಿ ಮುಖಂಡ ಎಚ್ ಎನ್ ಗಂಗಾಧರ್, ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್, ಅಲ್ಪಸಂಖ್ಯಾತ ಮುಖಂಡ ಅಜ್ಜು, ಮಹಾದೇವಯ್ಯ ಸೇರಿದಂತೆ ಮಹಾನ್ ನಾಯಕ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು ನಂತರ ಮಹಾನ್ ನಾಯಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಾನ್ ನಾಯಕರ ಹುಟ್ಟುಹಬ್ಬ ಪ್ರಯುಕ್ತ ಎಚ್ ಎನ್ ಗಂಗಾಧರ್ ಸಾರ್ವಜನಿಕರಿಗೆ ಶುಭ ಕೋರಿದರು.
ಈ ಮೆರವಣಿಗೆಯಲ್ಲಿ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗ ದಳ ಕಾರ್ಯದರ್ಶಿ ಶ್ರೀಕಾಂತ್, ಗೋವಿಂದರಾಜು ಡಿ, ವಿವಿಧ ಸಂಘಟನೆಗಳ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಕಲಾ ತಂಡಗಳು ಸಾರ್ವಜನಿಕರು ಸೇರಿದಂತೆ ಅಂಬೇಡ್ಕರ್ ಅಭಿಮಾನಿಗಳು ಪಾಲ್ಗೊಂಡಿದ್ದರು.
