ಉದಯವಾಹಿನಿ, ಹಾವೇರಿ: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ದಿನದಿಂದ ಹೆಚ್ಚಾಗುತ್ತಿದೆ. ಈ ಯುದ್ಧದಿಂದಾಗಿ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ಪರಿಣಾಮ ತಟ್ಟಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧದಿಂದಾಗಿ ಗಲ್ಪ್ ರಾಷ್ಟ್ರಗಳಿಗೆ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಪ್ತು ಸಂಪೂರ್ಣವಾಗಿ ನಿಂತು ಹೋಗಿದೆ. ಇತ್ತ ಬೇರೆ ದೇಶಗಳಿಗೆ ಮೆಣಸಿನಕಾಯಿ ರಪ್ತು ಬಾಡಿಗೆ ಕೂಡ ಹೆಚ್ಚಳವಾಗಿದೆ.
ಮಸಾಲೆ ಪದಾರ್ಥಗಳ ತಯಾರಿಕೆ, ಸೌಂದರ್ಯವರ್ಧಕ ತಯಾರಿಕೆಗೆ ಉಪಯೋಗಿಸುವ ಮೆಣಸಿನಕಾಯಿ, ಮಲೇಶಿಯಾ ಇಂಡೋನೇಶಿಯಾ, ಬಾಲಿ, ಥೈಲ್ಯಾಂಡ್, ಸಿಂಗಪೂರ್ ದೇಶಗಳಿಗೆ ರಫ್ತಾಗುತ್ತದೆ. ಅದರೆ ಇರಾನ್ ಮತ್ತು ಇಸ್ರೇಲ್ ಅಮೆರಿಕಾಕ್ಕೆ ಮೆಣಸಿನಕಾಯಿ ರಫ್ತು ಮಾಡೋ ಕಂಟೇನರ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ.
ಮೊದಲು ಒಂದು ಕಂಟೇನರ್‌ಗೆ 1800 ಯು.ಎಸ್ ಡಾಲರ್ ಬಾಡಿಗೆ ಇತ್ತು. ಈಗ ಒಂದು ಕಂಟೇನರ್ ಬಾಡಿಗೆ 3500 ಯು.ಎಸ್ ಡಾಲರ್ ದಾಟಿದೆ. ರಾಜ್ಯದ ಬಳ್ಳಾರಿ ಹಾಗೂ ಆಂಧ್ರಪದೇಶದ ನಾನಾ ಕಡೆಯಿಂದಲೂ ಬ್ಯಾಡಗಿ ಮೆಣಸಿನಕಾಯಿ ಮಾರಾಟಕ್ಕೆ ಜನ ಬರುತ್ತಾರೆ. ಹೀಗೆ ಮುಂದುವರೆದರೆ ರೈತರು ತರೋ ಮೆಣಸಿನಕಾಯಿ ಬೆಲೆ ಕಡಿಮೆ ಆಗುತ್ತೆ ಎಂದು ವರ್ತಕರು ಹೇಳುತ್ತಿದ್ದಾರೆ.
