ಉದಯವಾಹಿನಿ, : ನಾನೇ ಪ್ರಾದೇಶಿಕ ಪಕ್ಷ ಮಾಡಿ, 2028ಕ್ಕೆ ಅಧಿಕಾರಕ್ಕೆ ಬಂದು ನಾನೇ ಮುಖ್ಯಮಂತ್ರಿ ಎಂದು ವಿಜಯಪುರ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಬಿಜೆಪಿ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಲು ನಾನು ದೆಹಲಿಗೆ ಬಂದಿಲ್ಲ. ಯಾರ ಕಾಲಿಗೆ ಬಿದ್ದು ಪಕ್ಷ ಸೇರಿಸಿಕೊಳ್ಳಿ ಅಂತಾ ಕೇಳಲ್ಲ. ನಾನೇ ಪ್ರಾದೇಶಿಕ ಪಕ್ಷ ಮಾಡ್ತೀನಿ, 2028ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿ ಆಗ್ತಿನಿ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ, ಯಾರೇ ಏನೇ ಸರ್ವೇ ಮಾಡಿದ್ರು ಅಧಿಕಾರಕ್ಕೆ ಬರಲಿದೆ. ಜೆಸಿಬಿ ಆಗುತ್ತೋ? ಏನಾಗುತ್ತೋ? ನೋಡೋಣ ನಮ್ಮ ಪಕ್ಷನೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ಪಕ್ಷ ಸೇರಲ್ಲ. ವಿಜಯೇಂದ್ರ, ಯಡಿಯೂರಪ್ಪ, ರಾಘವೇಂದ್ರರ ಕುಟುಂಬ ಇರುವವರೆಗೂ ನಾನು ಪಕ್ಷ ಸೇರಲ್ಲ. ನಾನು ಹೋಗಿ ಕೈ, ಕಾಲು ಹಿಡಿದು ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತಾ ಹೇಳುವ ಅವಶ್ಯಕತೆ ಇಲ್ಲ. ನಾವು ಸ್ವಾಭಿಮಾನದಿಂದ ಬದುಕಿರುವವರು. ಭ್ರಷ್ಟ ಕುಟುಂಬದ ನೇತೃತ್ವ ನಾವು ಒಪ್ಪಲ್ಲ. ಭ್ರಷ್ಟ ಕುಟುಂಬ ಎಲ್ಲಿವರೆಗೆ ಇರುತ್ತೋ ಅಲ್ಲಿವರೆಗೂ ಬಿಜೆಪಿ ಸೇರುವ ಪ್ರಶ್ನೆ ಉದ್ಭವಿಸಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಅಂತಾ ಯಾರ ಬಳಿಯೂ ಹೋಗಲ್ಲ. ನಾನು ಅಷ್ಟರಲ್ಲಿ ಪ್ರಾದೇಶಿಕ ಪಕ್ಷ ಮಾಡ್ತಿನಿ ಕಾದು ಕೂರಲು ಹುಚ್ಚನಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!