ಉದಯವಾಹಿನಿ, ಅಮರಾವತಿ (ಆಂಧ್ರಪ್ರದೇಶ): ತಂತ್ರಜ್ಞಾನದ ಪರಾಕಾಷ್ಠೆಯಾದ ಕೃತಕ ಬುದ್ಧಿಮತ್ತೆಯು (ಎಐ)ಆರೋಗ್ಯ ಕ್ಷೇತ್ರಕ್ಕೂ ಅಡಿ ಇಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ಗುಣಮಟ್ಟ ಮತ್ತು ವೇಗ ಸುಧಾರಿಸಲು ಆಂಧ್ರಪ್ರದೇಶ ಸರ್ಕಾರವು ಎಐ ಮೂಲಕ ಚಿಕಿತ್ಸೆ ನೀಡುವ ಪ್ರಯೋಗವನ್ನು ಆರಂಭಿಸಿದೆ.
18 ಆರೋಗ್ಯ ರಕ್ಷಣಾ ಸ್ಟಾರ್ಟ್ಅಪ್ಗಳ ಸಹಯೋಗದಲ್ಲಿ 18 ಸರ್ಕಾರಿ ಆಸ್ಪತ್ರೆಗಳಲ್ಲಿ ಪೈಲಟ್ ಯೋಜನೆ (ಪ್ರಾಯೋಗಿಕ ಪರೀಕ್ಷೆ)ಯನ್ನು ಜಾರಿ ಮಾಡಿದೆ. ಮೂಲ ಪರೀಕ್ಷೆಗಳ ಮೂಲಕ ರೋಗಗಳನ್ನು ತ್ವರಿತವಾಗಿ ಗುರುತಿಸಿ ಸಕಾಲಿಕ ಚಿಕಿತ್ಸೆ ಒದಗಿಸುವ ಗುರಿ ನೀಡಲಾಗಿದೆ. AI ಚಿಕಿತ್ಸಾ ವಿಧಾನ ಹೀಗಿರುತ್ತೆ: ಕೃತಕ ಬುದ್ಧಿಮತ್ತೆ (ಎಐ)ಯಿಂದ ರೋಗಿಯ ಅನಾರೋಗ್ಯವನ್ನು ತ್ವರಿತವಾಗಿ ಪತ್ತೆಮಾಡುವುದು, ವೈದ್ಯರು ಸ್ಥಳದಲ್ಲಿ ಇಲ್ಲದಾಗ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಐಡಿಯೊಂದಿಗೆ ರೋಗಿಯನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ತಿಳಿದುಕೊಳ್ಳುವುದು. ತಕ್ಷಣವೇ ಅವರಿಗೆ ತಡೆರಹಿತ ಆರೋಗ್ಯ ಸೇವೆ ನೀಡಲಾಗುತ್ತದೆ. ವೈದ್ಯರು ರೋಗಿಗಳೊಂದಿಗೆ ನಡೆಸಿದ ಸಂಭಾಷಣೆ, ಸಮಾಲೋಚನೆಗಳ ವೇಳೆ ವಿವರಿಸಿದ ರೋಗಲಕ್ಷಣಗಳ ಆಧಾರದ ಮೇಲೆ ರೋಗನಿರ್ಣಯದಲ್ಲಿ ಸಹಾಯ ಮಾಡುವ AI ಪರಿಕರಗಳನ್ನು ಬಳಸಲಾಗುತ್ತದೆ. ಎಐ ನೀಡುವ ಸಲಹೆಗಳನ್ನು ಪಡೆದುಕೊಂಡು ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ.
ಯಾವ ಆಸ್ಪತ್ರೆಗಳಲ್ಲಿ ಯಾವುದಕ್ಕೆ AI ಬಳಕೆ: ಈ ಪ್ರಾಯೋಗಿಕ ಸೇವೆಗಳನ್ನು ಪ್ರಸ್ತುತ ಸತ್ತೇನಪಲ್ಲಿ ಏರಿಯಾ ಆಸ್ಪತ್ರೆ, ತೆನಾಲಿ ಜಿಲ್ಲಾ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಿಶಾಖಪಟ್ಟಣಂ, ಸರ್ಕಾರಿ ಜನರಲ್ ಆಸ್ಪತ್ರೆ ಕಾಕಿನಾಡ ಮತ್ತು ಪಾರ್ವತಿಪುರಂ ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದೆ. ಇಲ್ಲಿ, ತುರ್ತು ಸಂದರ್ಭಗಳಲ್ಲಿ ನವಜಾತ ಶಿಶುಗಳಿಗೆ ಸಹಾಯ ಮಾಡಲು ಎಐ ಚಾಲಿತ ಸಾಧನಗಳನ್ನು ದೇಹದಲ್ಲಿ ಅಳವಡಿಸಲಾದ ಉಪಕರಣಗಳ ಮೂಲಕ ಆಮ್ಲಜನಕ ಒದಗಿಸಲಾಗುತ್ತಿದೆ. ಅದೇ ರೀತಿ, ವೃದ್ಧ ರೋಗಿಗಳಲ್ಲಿ ಕೀಲು ನೋವಿನ ಕಾರಣಗಳನ್ನು ಗುರುತಿಸಲು ಈ ಎಐ ಉಪಕರಣಗಳು ವೈದ್ಯರಿಗೆ ಸಹಾಯ ಮಾಡುತ್ತಿವೆ.ಇನ್ನು, ವಿಶಾಖಪಟ್ಟಣದ ಸರ್ಕಾರಿ ಮಾನಸಿಕ ಆಸ್ಪತ್ರೆ, ಅನಂತಪುರದ ಸರ್ಕಾರಿ ಆಸ್ಪತ್ರೆ, ಚಾಗಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಜನಗರಂ ಉಪ ಕೇಂದ್ರಗಳಲ್ಲಿ ರೋಗ ಪತ್ತೆಗೆ ಎಐ ಬಳಸಲಾಗುತ್ತಿದೆ. ಇಲ್ಲಿ, ಹೃದಯ ಸಂಬಂಧಿ ಕಾಯಿಲೆಗಳು, ಮಕ್ಕಳಲ್ಲಿ ನರದೌರ್ಬಲ್ಯ ಮತ್ತು ಕ್ಷಯರೋಗವನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ.
ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಐ ಚಾಲಿತ ಕ್ಯಾಮೆರಾ ಬಳಸಿಕೊಂಡು ಗರ್ಭಕಂಠದ ಕ್ಯಾನ್ಸರ್, ಕಣ್ಣಿನ ಪೊರೆ ಮತ್ತು ಮಧುಮೇಹ ನರರೋಗವನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ. ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಕ್ಷಯರೋಗ ಪತ್ತೆಗಾಗಿ RT-PCR ನಂತಹ ಸುಧಾರಿತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಬ್ಲಡ್ ಸ್ಯಾಂಪಲ್ ಪಡೆಯಬೇಕಿಲ್ಲ: ರಕ್ತದ ಮಾದರಿಗಳನ್ನು ತೆಗೆದುಕೊಳ್ಳದೆ ಕಣ್ಣಿನ ಚಿತ್ರಗಳನ್ನು ವಿಶ್ಲೇಷಿಸುವ ಮೂಲಕ ರಕ್ತಹೀನತೆಯನ್ನು ಪತ್ತೆಹಚ್ಚಲು ವೈದ್ಯರು ಟೆಲಿಮೆಡಿಸಿನ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಸ್ಟೆತೊಸ್ಕೋಪ್‌ಗೆ ಜೋಡಿಸಲಾದ ಸಣ್ಣ ಸಾಧನವು ECG ಅಗತ್ಯವಿಲ್ಲದೇ ಹೃದಯ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲಾಗುತ್ತಿದೆ. ಪಾಡೇರು, ಕರ್ನೂಲ್, ಅನಂತಪುರದ ಸರ್ಕಾರಿ ಆಸ್ಪತ್ರೆ ಮತ್ತು ತಿರುಪತಿಯ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ರೋಗಿಗಳ ರಕ್ತದೊತ್ತಡ(ಬಿಪಿ), ನಾಡಿಮಿಡಿತ, ದೇಹದ ಉಷ್ಣತೆ ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ವಿಶೇಷ ಎಐ ಸಾಧನಗಳನ್ನು ಅಳವಡಿಸಲಾಗಿದೆ.

ಉದಯವಾಹಿನಿ, ಅಮರಾವತಿ (ಆಂಧ್ರಪ್ರದೇಶ): ತಂತ್ರಜ್ಞಾನದ ಪರಾಕಾಷ್ಠೆಯಾದ ಕೃತಕ ಬುದ್ಧಿಮತ್ತೆಯು (ಎಐ)ಆರೋಗ್ಯ ಕ್ಷೇತ್ರಕ್ಕೂ ಅಡಿ ಇಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ಗುಣಮಟ್ಟ ಮತ್ತು ವೇಗ ಸುಧಾರಿಸಲು ಆಂಧ್ರಪ್ರದೇಶ ಸರ್ಕಾರವು ಎಐ ಮೂಲಕ ಚಿಕಿತ್ಸೆ ನೀಡುವ ಪ್ರಯೋಗವನ್ನು ಆರಂಭಿಸಿದೆ.