ಉದಯವಾಹಿನಿ, ಚಿಂಚೋಳಿ: ಹಿಂದೂ ಮುಸ್ಲಿಂಮರು ಜಾತಿ ಧರ್ಮದ ಭೇದಭಾವ ತೊರೆದು ಒಗ್ಗಟ್ಟಾಗಿ ಆಚರಿಸುವ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವೆ ಮೊಹರಂ ಆಗಿದೆ.
ಅವಳಿ ಪಟ್ಟಣಗಳಾದ ಚಿಂಚೋಳಿ-ಚಂದಾಪೂರ ಸೇರಿ ಒಟ್ಟು 13ಕಡೆ ಮೊಹರಂ ಹಬ್ಬದ ಪೀರಗಳು ಅಮವಾಸ್ಯೆ ಆದ ಮರುದಿನ ಗುದ್ದಲಿ ಹಾಕಿ ಮರುದಿನ ಹತ್ತು ದಿನದ ಪೀರಗಳು ಹಾಗೂ ಐದು ದಿನದ ಪೀರಗಳು ಸ್ಥಾಪನೆ ಮಾಡುತ್ತಾರೆ. ಮೊಹರಂ ಹಬ್ಬದ ಹತ್ತನೇ (ದಸವೀ) ದಿನ ಪಟ್ಟಣದ 13ಕಡೆ ಸ್ಥಾಪನೆ ಮಾಡಿದ ಪೀರಗಳು ಎಬ್ಬಿಸಿಕೊಂಡು ವಿಜೃಂಭಣೆಯಿಂದ ಆಚರಣೆ ಮಾಡುತ್ತಾ ಮೊಹರಂ ಪದಗಳು ಹಾಡುತ್ತಾ ಹುಲಿಯ ವೇಷ ಬಣ್ಣ ಧರಿಸಿ ನೃತ್ಯ ಪ್ರದರ್ಶನ ಮಾಡುತ್ತಾ ಬಡಿದರ್ಗಾದ ಬಾಗಿಲಿಗೆ ಬಂದು ದಫಾನ್ ಆಗಲು ಬರುತ್ತಾರೆ.ಪಟ್ಟಣದ ಬಡಿದರ್ಗಾದ ಚಂದಾ ಹುಸೇನಿ,ಹಸೇನ್ ಹುಸೈನ್ ಆಲಂಗಳು ದರ್ಗಾದ ಸಜ್ಜಾದೆ ನಶೀನ್ ಸೈಯದ್ ಶಾಹ ಅಕ್ಬರ್ ಹುಸೇನ್ ನೇತೃತ್ವದಲ್ಲಿ ಸಾಯಂಕಾಲ ಪೀರಗಳು ಎಬ್ಬಿಸಿ ಪಟ್ಟಣದಲ್ಲಿನ ಬಂದ ಎಲ್ಲಾ ಪೀರಗಳಿಗೆ ಭೇಟಿಯಾಗಿ ದಫಾನ್ ಮಾಡಿ ಮತ್ತೆ ಅವರವರ ಸ್ಥಳಗಳಿಗೆ ಹೋಗಿ ಪೀರಗಳು ಸ್ಥಾಪನೆ ಮಾಡಿದ್ದರು. ಪಟ್ಟಣದ ಬಡಿದರ್ಗಾದ ಆಲಂಗಳು ಅತಿದೊಡ್ಡ ಗಾತ್ರದಿಂದ ಹೊಂದಿದ ಪೀರಗಳು ನೋಡಲು ಸುತ್ತಮುತ್ತಲಿನ ಗ್ರಾಮಗಳಾದ ಐನೋಳ್ಳಿ, ಕೋಳ್ಳೂರ,ಪತ್ತೆಪೂರ,ಅಣವಾರ,ನಿಮಾಹೋಸಳ್ಳಿ,ಚಿಮ್ಮಾಯಿದ್ಲಾಯಿ,ನಾಗಯಿದ್ಲಾಯಿ,ಎಂಪಳ್ಳಿ,ಪೋಲಕಪಳ್ಳಿ,ಕಲ್ಲೂರ ರೋಡ,ದೇಗಲಮಡಿ,ಕನಕಪುರ,ತಾದಲಾಪೂರ,ದೋಟಿಕೋಳ,ಅನೇಕ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸಿ ಚಂದಾ ಹುಸೇನಿ ಪೀರ್ ಎಬ್ಬಿಸುವಾಗ ನಾಣ್ಯಗಳು ಏಸೇದು ಜನರು ಹರಕೆ ತಿರಿಸುತ್ತಾರೆ. ಯಾವುದೇ ಅನಾಹುತ ಆಗದಂತೆ ಡಿವೈಎಸ್ಪಿ ಕೆ.ಬಸವರಾಜ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ  ಸೈಯದ್ ಶಾಹ ಮೀರಾ ಹುಸೇನಿ,ಕೆ.ಎಂ.ಬಾರಿ.ಅಬ್ದುಲ್ ಬಾಷೀದ್,ಸೈಯದ್ ಶಬ್ಬೀರ,ಅನ್ವರ್ ಖತೀಬ್,ಎಸ್ಕೆ ಮೋಖ್ತಾರ್,ಎಂಕೆ ಮಖ್ದುಮ್,ರಹೇಮತಪಾಷ ನಿಮಾಹೋಸಳ್ಳಿ,ಗೌತಮ್ ವೈಜಿನಾಥ ಪಾಟೀಲ,ಮಸ್ತಾನ ಪಟೇಲ ನೀಮಾಹೋಸಳ್ಳಿ,ಬಸವರಾಜ ವಾಡಿ,ಐಯ್ಯುಬ್ ಇನಾಂದಾರ,ಮೋಸೀನ್ ಇನಾಂದಾರ,ವಿಠ್ಠಲ ಕುಸಾಳೆ,ಶ್ರೀಕಾಂತ ಜಾನಕಿ,ಮಖ್ತೂಮ್ ಜಬ್ಬಾರ್,ಹನೀಫ್ ಶಾಹ,ಮಹ್ಮುದ್ ಸಲಿಂ,ಅನೇಕರಿದ್ದರು.
ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮನೆ ಸಮರ್ಪಿಸಿಕೊಂಡ ಹಜರತ್ ಹಸನ್ ಹುಸೈನ್ ಪುಣ್ಯ ಸ್ಮರಣೆಯ ನಿಮಿತ್ತ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ,ಜಾತಿ ಧರ್ಮ ಭೇದಭಾವದ ಹಂಗಿಲದೆ ಮನುಕೂಲ ಒಂದೇ ಎಂಬ ಸಂದೇಶ ಮೊಹರಂ ಹಬ್ಬದ ಸಂಕೇತವಾಗಿದೆ :- ಅಬ್ದುಲ್ ಬಾಷೀದ್ ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಚಿಂಚೋಳಿ.
ಸರ್ವಧರ್ಮಗಳ ಭಾವೈಕ್ಯತೆಯ ಕೊಂಡಿಯಾಗಿರುವ ಮೊಹರಂ ಹಬ್ಬ ಆಧುನಿಕ ಯುಗದಲ್ಲೂ ಸ್ನೇಹ ಸೌಹಾರ್ದ ಸಹೋದರತ್ವದ ಸಂಕೇತವಾಗಿ ನಡೆದುಕೊಂಡು ಬರುತ್ತಿದ್ದು,ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಹಬ್ಬವನ್ನು ಎಲ್ಲಾ ಜನಾಂಗದವರು ಸೇರಿಕೊಂಡು ಆಚರಿಸಿ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಾರೆ :ಕೆ.ಎಂ.ಬಾರಿ ಪುರಸಭೆ ಮಾಜಿ ಉಪಾಧ್ಯಕ್ಷರು,ಹಿರಿಯ ಮುಖಂಡರು ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!