ಉದಯವಾಹಿನಿ, ಜೇವರ್ಗಿ: ನದಿ ದಡದಲ್ಲಿರುವ ಗ್ರಾಮಗಳಲ್ಲಿನ ಜನರಿಗೆ ಅಧೀಕಾರಿಗಳು ಜಾಗೃತಿ ಮುಡಿಸಿ, ಅವರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಬೇಕು ಎಂದು ತಾಲೂಕ ಅಧೀಕಾರಿಗಳಿಗೆ ಜಿಲ್ಲಾಧೀಕಾರಿ ಬಿ. ಫೌಝೀಯಾ ತರುನ್ನುಮ್ ಸುಚಿಸಿದರು.ಶನಿವಾರ ತಾಲೂಕಿನ ಮಂದೇವಾಲ, ಜೇರಟಗಿ, ನೆಲೋಗಿ, ಕಟ್ಟಿಸಂಗಾವಿ ಗ್ರಾಮಗಳಿಗೆ ಭೇಟಿ ನೀಡಿ ಸುರಿದ ಮಳೆಯಿಂದ ಹಾನಿಯಾದ ಮನೆಗಳ ವೀಕ್ಷಣೆ ಮಾಡಿದರು.ನದಿ ಪಕ್ಕದಲ್ಲಿರುವ ಸಾರ್ವಜನಿಕರು ನದಿಯು ಒಳಗಡೆ ಇಳಿಯದಂತೆ ನೋಡಿಕೊಳ್ಳಬೇಕು. ನದಿ ಪಕ್ಕದಲ್ಲಿರುವ ಮನೆಗಳ ನಿವಾಸಿಗಳು ತಮ್ಮ ಸಂಬAಧಿಕರ ಮನೆಯಲ್ಲಿ ಉಳಿದುಕೊಳ್ಳಬೇಕು. ನಾಲ್ಕು ದಿನಗಳಲ್ಲಿ ಭಾರಿ ಮಳೆ ಬರುವ ಸಂಭವವಿದ್ದ ಕಾರಣ ತಾತ್ಕಾಲಿಕವಾಗಿ ಸಂಬ0ಧಿಕರ ಬಳಿ ಉಳಿದುಕೊಳ್ಳಬೇಕು. ನದಿ ದಡದಲ್ಲಿರುವ ಗ್ರಾಮಗಳಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ತಾಲೂಕಿನಲ್ಲಿ ೫೨ ಮನೆಗಳು ಹಾನಿಯಾಗಿವೆ ಕೂಡಲೆ ವರದಿ ಸಲ್ಲಿಸಿ ಅವುಗಳಿಗೆ ಬೇಗನೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳು ದಂಡಾಧಿಕಾರಿಗಳಿಗೆ ತಿಳಿಸಿದರು.
ಕಟ್ಟಿ ಸಂಗಾವಿ ಭೀಮಾ ನದಿಯ ನೀರಿನ ಮಟ್ಟ ವೀಕ್ಷಣೆ ಮಾಡಿ ಗ್ರಾಮಸ್ಥರಿಗೆ ಅಕ್ಕಪಕ್ಕದಲ್ಲಿ ಯಾರು ಸಂಚರಿಸಬಾರದು ನಿಮ್ಮ ದನಕರಗಳು ಇತ್ತ ಕಡೆ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಶ್ರೀಮತಿ ರಾಜೇಶ್ವರಿ, ಉಪದಂಡಾಧಿಕಾರಿ ಪ್ರಸನ್ನಕುಮಾರ್ ಮೋಗೆಕರ್, ಅಧಿಕಾರಿಗಳಾದ ಹೃಷಿಕೇಶ್ ದಂತಕಾಳೆ, ಅಬ್ದುಲ್ ನಬಿ, ಅಶೋಕ್ ನಾಯಕ್, ದೀಪಿಕಾ, ಡಾ. ಸಿದ್ದು ಪಾಟೀಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
